ಭಾರತೀನಗರ: ಇಲ್ಲಿಗೆ ಸಮೀಪದ ಕಾರ್ಕಹಳ್ಳಿ ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ದೇವರ ಬಸ ಪ್ಪ ಅನಾರೋಗ್ಯದಿಂದ ಸಾವನ್ನಪ್ಪಿದೆ. ಕೆ.ಆರ್.ಪೇಟೆ ಮೂಲದ ಈ ಬಸವಪ್ಪನನ್ನು ೬ ತಿಂಗಳ ಕರುವಿದ್ದಾಗ ದೇವಸ್ಥಾನಕ್ಕೆ ಕರೆತರಲಾಗಿತ್ತು. ನಂತರ ರಾಜ್ಯಾ ದ್ಯಂತ ಜನಮನ್ನಣೆ ಗಳಿಸಿತ್ತು. 4 ವರ್ಷ ಪ್ರಾಯದ ಹಳ್ಳಿಕಾರ್ ತಳಿಯ ಬಸವಪ್ಪ ಹಲವು ದಿನಗಳಿಂದ ಕಾಲು ಮುರಿದು ಕೊಂಡು ನೋವಿನಿಂದ ಬಳಲುತ್ತಿದ್ದು, ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಈ ದೇವಾಲಯ ಮುಜುರಾಯಿ ಇಲಾಖೆಗೆ ಸೇರಿರುವ ಹಿನ್ನೆಲೆಯಲ್ಲಿ ತಹಸಿಲ್ದಾರ್ ಅವರ ನೇತೃತ್ವದಲ್ಲಿ ಬಸವಪ್ಪನ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ. ಅಂತ್ಯಸಂಸ್ಕಾರಕ್ಕೆ ನೂರಾರು ಜನರು ಆಗಮಿಸಿ ಬಸವಪ್ಪನ ಅಂತಿನ ದರ್ಶನ ಪಡೆದರು.
ಗಣ್ಯರ ಭೇಟಿ: ಶಾಸಕ ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಕಾಂಗ್ರೆಸ್ ಮುಖಂಡರಾದ ಗುರುಚರಣ್, ಆಶತ=ಯ್ ಮಧು ಮಾದೇಗೌಡ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಬಸವಪ್ಪನ ಅಂತಿಮ ದರ್ಶನ ಪಡೆದರು.
ಮೆರವಣಿಗೆ: ಇದಕ್ಕೂ ಮುನ್ನ ಬಸವಪ್ಪನನ್ನು ಶೃಂಗರಿಸಿ ಎತ್ತುಗಾಡಿಯ ಮೂಲಕ ಮೆರವಣಿಗೆ ಮಾಡಲಾಯಿತು. ಬಳಿಕ ಬನ್ನಿಮರದ ಬಳಿ ಹೂಳಲಾಯಿತು.