Light
Dark

ಡೆತ್ ನೋಟ್ ಬರೆದಿಟ್ಟು ಉಪನ್ಯಾಸಕಿ ಸಾವಿಗೆ ಶರಣು

ಚಾಮರಾಜನಗರ: ತಮ್ಮ ಜನ್ಮ ದಿನದಂದೇ, ಕಾಲೇಜು ಉಪನ್ಯಾಸಕಿಯೋರ್ವರು ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.
ನಗರದ ಜೆ ಎಸ್ ಎಸ್ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಚಂದನಾ (26)
ಮೃತರು.

ಅವಿವಾಹಿತೆಯಾಗಿದ್ದ ಚಂದನಾ ಯಳಂದೂರು ತಾಲ್ಲೂಕು ಅಂಬಳೆ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕ ಮಹದೇವಸ್ವಾಮಿ ಎಂಬುವರ ಪುತ್ರಿ.ನಗರದ ಜೆ ಎಸ್ ಎಸ್ ಕಾಲೇಜು ಜೀವಶಾಸ್ತ್ರ ಉಪನ್ಯಾಸಕಿಯಾಗಿದ್ದರು.

ಇಂದು ಬೆಳಿಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಘಟನೆ‌ ನಡೆದಿರಬಹುದೆಂದು ಹೇಳಲಾಗಿದೆ. ಬೆ. 11.30 ಆದರೂ ಚಂದನಾ ಅವರು ಹಾಸ್ಟೆಲ್ ರೂಮಿನಿಂದ ಹೊರಬಾರದ ಕಾರಣ ವೆಂಟಿಲೇಟರ್ ಮೂಲಕ ನೋಡಿದಾಗ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ. ನಗರದ ಜೆ ಎಸ್ ಎಸ್ ಕಾಲೇಜು ಕ್ಯಾಂಪಸ್ ನಲ್ಲಿರುವ ಹಾಸ್ಟೆಲ್ ನಲ್ಲಿ ವಾಸವಿದ್ದರು.
ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ನಿಖರ ಕಾರಣ ತಿಳಿಸಿಲ್ಲ.

ಇಂದು ಅವರ ಜನ್ಮದಿನವಾಗಿದ್ದು ಹಾಸ್ಟೆಲ್ ಸಹೋದ್ಯೋಗಿಗಳುವ ಬೆಳಿಗ್ಗೆ ಶುಭ ಕೋರಿದ್ದಾರೆ. ತಿಂಡಿಗೆ ಕರೆದಾಗ ನನ್ನ ಮೂಡ್ ಚೆನ್ನಾಗಿಲ್ಲ ಆಮೇಲೆ ಬರುತ್ತೇನೆ ಎಂದು ಹೇಳಿದ್ದಾರೆ. ಕೆಲ ಸಮಯದ ಬಳಿಕ ಸಾವಿಗೆ ಶರಣಾಗಿದ್ದಾರೆ.

ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ