Light
Dark

ದಕ್ಷಿಣ ಕಾಶಿಯಲ್ಲಿ ಕೋಡಿ ಬಿದ್ದ ಕೆರೆಗಳು : ರಾತ್ರಿಯೆಲ್ಲಾ ಜನರ ಜಾಗರಣೆ!

ನಂಜನಗೂಡು :  ತಾಲ್ಲೂಕಿನಾದ್ಯಂತ  ಭಾನುವಾರ ಸುರಿದ ಧಾರಾಕಾರ ಮಳೆಗೆ ಹುರ,ವಳಗರೆ ಕೆರೆ ಸೇರಿದಂತೆ ಹಲವಾರು ಕೆರೆಗಳು ಕೋಡಿ ಬಿದ್ದಿದ್ದು, ಭಾರೀ ಪ್ರಮಾಣದ ನೀರು ನುಗು ನಾಲೆಗೆ ಉಕ್ಕಿ ಹರಿದ ಪರಿಣಾಮ ನೂರಾರು ಹೆಕ್ಟೇರ್‌  ಕೃಷಿ ಜಮೀನಿನ ಬೆಳೆಗೆ ಹಾನಿಯಾಗಿದೆ.


ನಂಜನಗೂಡು ಪಟ್ಟಣದ ಹುಲ್ಲಹಳ್ಲಿ ರಸ್ತೆ ಎಡ ಭಾಗದ ಬೀದಿಗಳಿಗೆ ಚರಂಡಿ ನೀರು ಪ್ರವಾಹದ ರೀತಿಯಲ್ಲಿ ನುಗ್ಗಿದ ಪರಿಣಾಮ ಆ ಬೀದಿಗಳ ಮನೆಗಳ ಒಳಗೂ ಚರಂಡಿ ನೀರು ಆವೃತ್ತವಾದ ಪರಿಣಾಮ ಅಲ್ಲಿನ ನಿವಾಸಿಗಳು ರಾತ್ರಿಯಲ್ಲಾ ಜಾಗರಣೆ ಮಾಡುವಂತಾಗಿದೆ.


ಈ ಬೀದಿಯ ಮನೆಗಳಿಗೆ ಚರಂಡಿ ನೀರಿನ ಜೊತೆ ಹಾವು ಚೇಳುಗಳು ಪ್ರವೇಶ ಮಾಡಿದ್ದು, ಆ ಮನೆಗಳ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಒಳಚರಂಡಿ ಗಳ ಮುಖಾಂತರ ನೀರು ರಸ್ತೆಯಲ್ಲೇ ಭುಗಿಲೇಳತೊಡಗಿದ್ದು, ನಂಜನಗೂಡಿನ ಜನತೆ ಕಂಗಾಲಾಗಿದ್ದಾರೆ. ಈ ಸಂಬಂಧ ಆಧಿಕಾರಿಗಳ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ