Mysore
23
overcast clouds

Social Media

ಭಾನುವಾರ, 14 ಜೂನ್ 2026
Light
Dark

ಶಿವಮೊಗ್ಗ- ಮೈಸೂರು ನಡುವೆ ನಿತ್ಯ ನಾಲ್ಕು ರೈಲುಗಳ ಸಂಚಾರ

ಮೈಸೂರು: ಶಿವಮೊಗ್ಗ ಮತ್ತು ಮೈಸೂರು ನಡುವೆ ಪ್ರತಿದಿನ ನಾಲ್ಕು ರೈಲುಗಳು ಸಂಚರಿಸಲಿವೆ.
ಶಿವಮೊಗ್ಗ-ಮೈಸೂರು ನಡುವೆ ಕುವೆಂಪು ಎಕ್ಸ್‌ಪ್ರೆಸ್: (ರೈಲು ಸಂಖ್ಯೆ-೧೬೨೨೧)ಬೆಳಿಗ್ಗೆ ೬.೧೫ಕ್ಕೆ ತಾಳಗುಪ್ಪದಿಂದ ಹೊರಡಲಿದೆ. ಮಧ್ಯಾಹ್ನ ೩.೩೫ಕ್ಕೆ ಮೈಸೂರು ರೈಲ್ವೆ ನಿಲ್ದಾಣ ತಲುಪಲಿದೆ.
ಶಿವಮೊಗ್ಗ ಟೌನ್-ಮೈಸೂರು ಎಕ್ಸ್ ಪ್ರೆಸ್(ರೈಲು ಸಂಖ್ಯೆ ೧೬೨೨೬), ಶಿವಮೊಗ್ಗದಿಂದ ಬೆಳಿಗ್ಗೆ ೧೧.೧೫ಕ್ಕೆ ಹೊರಡುವ ರೈಲು ಸಂಜೆ ೪.೫೦ಕ್ಕೆ ಮೈಸೂರು ರೈಲ್ವೆ ನಿಲ್ದಾಣ ತಲುಪಲಿದೆ.
ತಾಳಗುಪ್ಪ-ಮೈಸೂರು ಇಂಟರ್ ಸಿಟಿ(ರೈಲು ಸಂಖ್ಯೆ ೧೬೨೦೫) ತಾಳಗುಪ್ಪದಿಂದ ಮಧ್ಯಾಹ್ನ ೩ ಗಂಟೆಗೆ ಹೊರಡುವ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲು ರಾತ್ರಿ ೧೦.೧೫ಕ್ಕೆ ಮೈಸೂರಿಗೆ ತಲುಪಲಿದೆ.
ತಾಳಗುಪ್ಪ-ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್(ರೈಲು ಸಂಖ್ಯೆ ೧೬೨೨೮) ರಾತ್ರಿ ೯ ಗಂಟೆಗೆ ತಾಳಗುಪ್ಪದಿಂದ ಹೊರಟು ಬೆಳಿಗ್ಗೆ ೫ ಗಂಟೆಗೆ ಬೆಂಗಳೂರು ತಲುಪಲಿದೆ. ಬೆಳಿಗ್ಗೆ ೮.೨೦ಕ್ಕೆ ಮೈಸೂರು ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!