Light
Dark

ಹುಲಿ ಉಗುರು ಮಾರಾಟಕ್ಕೆ ಯತ್ನ; ಇಬ್ಬರ ಬಂಧನ

ಚಾಮರಾಜನಗರ :ಡಾ. ಬಿ. ಆರ್. ಅಂಬೇಡ್ಕರ್ ಭವನದ ರಸ್ತೆಯಲ್ಲಿ ಹುಲಿ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹುಲಿ ಉಗುರುಗಳು
ಹುಲಿ ಉಗುರುಗಳು

ನಗರದ ಕೆಪಿ ಮೋಹಲ್ಲಾದ ಫರ್ಹಾದ್ ಉರ್ ರೆಹಮಾನ್(33) ಮತ್ತು ಯಾಸಿರ್ ಅರಾಫತ್ (19) ಬಂದಿದ್ದರು ಇವರಿಂದ ಎಂಟು ಹುಲಿ ಉಗುರುಗಳನ್ನು ವಶಕೆ ಪಡೆಯಲಾಗಿದೆ.

ಬುಧವಾರ ಬೆಳಗ್ಗೆ ಖಚಿತ ಮಾಹಿತಿ ಆಧರಿಸಿ ನಗರದ ಸೈಬರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಹದೇವ ಶೆಟ್ಟಿ, ಸಬ್ ಇನ್ಸ್ ಪೆಕ್ಟರ್ ಮಾದೇಶ ಹಾಗೂ ಸಿಬ್ಬಂದಿ ಖರೀದಿದಾರರಂತೆ ನಟಿಸಿ ದಾಳಿ ಮಾಡಿದರು. ಬಳಿಕ ಆರೋಪಿಗಳನ್ನು ವಸತಿ ಪಡೆದು 3.50 ಲಕ್ಷ ಬೆಲೆಬಾಳುವ ಎಂಟು ಹುಲಿ ಉಗುರುಗಳನ್ನು ವಶಪಡಿಸಿಕೊಂಡರು. ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಚಾಮರಾಜನಗರ ವಲಯಾರಣ್ಯಾಧಿಕಾರಿ ವಸಕ್ಕೆ ನೀಡಿದ್ದಾರೆ. ಕಾರ್ಯಚರಣೆಯಲ್ಲಿ ಸೈಬರ್ ಠಾಣೆಯ ಸಿಬ್ಬಂದಿ ರಾಜು, ಮಂಜುನಾಥ್, ಜಗದೀಶ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯಾದ ಹೇಮಂತ್ ಕುಮಾರ್, ಜಗದೀಶ್ ಪಾಲ್ಗೊಂಡಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ