Light
Dark

ಚಾ.ನಗರ ಅವಳಿ ಜಲಾಶಯಗಳು ಭರ್ತಿ; ಬಿ.ರಾಚಯ್ಯರನ್ನು ನೆನಪಿಸಿಕೊಂಡ ಜನ

ಚಾಮರಾಜನಗರ: ಜಿಲ್ಲೆಯ ಅವಳಿ ಜಲಾಶಯಗಳು ಎಂದೇ ಪ್ರಸಿದ್ಧಿಯಾಗಿರುವ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳು ಭರ್ತಿಯಾಗಿದ್ದು ಜಿಲ್ಲೆಯ ಜನರು ಮಾಜಿ ರಾಜ್ಯಪಾಲ ದಿ ಬಿ.ರಾಚಯ್ಯ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಚಾ.ನಗರ ತಾಲ್ಲೂಕಿನ ಸುವರ್ಣಾವತಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿರುವ ವಿಡಿಯೋ ಒಂದಕ್ಕೆ ದಿ.ಬಿ.ರಾಚಯ್ಯ ಅವರ ಪೋಟೋವನ್ನು ಹಾಕಿ ಜಲಾಶಯ ನಿರ್ಮಾಣಕ್ಕೆ ಶ್ರಮಿಸಿದ ರಾಜಕೀಯ ನಾಯಕನನ್ನು ಈ ಮೂಲಕ ಸ್ಮರಿಸಿಕೊಳ್ಳುತ್ತಿದ್ದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ