ಚಾಮರಾಜನಗರ: ಪವಾಡ ಪುರುಷ ನೆಲೆಸಿರುವ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಖಗ್ರಾಸ ಚಂದ್ರಗ್ರಹಣದ ವೇಳೆ ಎಂದಿನಂತೆ ಪೂಜಾ-ಕೈಂಕರ್ಯಗಳು ನೆರವೇರಲಿವೆ.
ಇದನ್ನೂ ಓದಿ: ಕರ್ನಾಟಕ ರಫ್ತಿನಲ್ಲಿ ಮೊದಲ ಸ್ಥಾನಕ್ಕೆ ಬರಬೇಕು: ಟಿ ದಿನೇಶ್
ರಾಜ್ಯದ ಪ್ರಮುಖ ದೇವಾಲಯವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ವಿಶಿಷ್ಟ ಪರಂಪರೆ ಇದೆ. ಸೂರ್ಯಗ್ರಹಣ, ಚಂದ್ರಗ್ರಹಣ ವೇಳೆ ಎಂದಿನಂತೆ ಪೂಜೆ, ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಗ್ರಹಣದ ಸಂದರ್ಭದಲ್ಲಿ ಸಾಮಾನ್ಯವಾಗಿ ದೇವಾಲಯಗಳು ಮುಚ್ಚಲ್ಪಡುತ್ತವೆ. ಆದರೆ ಮಲೆ ಮಹದೇಶ್ವರ ಬೆಟ್ಡದಲ್ಲಿ ಗ್ರಹಣದ ವೇಳೆಯೂ ಮಲೆ ಮಾದಪ್ಪನಿಗೆ ತ್ರಿಕಾಲ ಪೂಜೆ ನೆರವೇರಲಿದ್ದು, ಭಕ್ತರಿಗೆ ದರ್ಶನ ಕೂಡ ಇರುತ್ತದೆ.





