ಚಾಮರಾಜನಗರ: ಕರ್ನಾಟಕ-ತಮಿಳುನಾಡು ಗಡಿ ಪ್ರದೇಶವಾದ ಎತ್ತಿಗಟ್ಟಿ ಸಮೀಪ 20ಕ್ಕೂ ಹೆಚ್ಚು ಕಾಡಾನೆಗಳು ಜಮೀನಿಗೆ ಲಗ್ಗೆಯಿಟ್ಟು ದಾಂಧಲೆ ನಡೆಸಿವೆ.
ಇಂದು ಬೆಳಗಿನ ಜಾವ ಅನೆಗಳ ಹಿಂಡು ಜಮೀನಿಗೆ ನುಗ್ಗಿ ರಸ್ತೆ ದಾಟಿ ಹೋಗಿವೆ. ಆನೆಗಳನ್ನು ಕಂಡು ಜನರು ಬೆಚ್ಚಿಬಿದ್ದಿದ್ದು, ರಸ್ತೆಯಲ್ಲೇ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಮಧ್ಯರಾತ್ರಿ ಹಾಗೂ ಬೆಳಗಿನ ಜಾವ ಆನೆಗಳ ಓಡಾಟ ಜಾಸ್ತಿಯಾಗಿದ್ದು, ಕರ್ನಾಟಕ ಹಾಗೂ ತಮಿಳುನಾಡು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಆನೆಗಳು ನಾಡಿಗೆ ಬರದಂತೆ ಕ್ರಮ ವಹಿಸಬೇಕಾಗಿ ಆ ಭಾಗದ ಜನರು ಮನವಿ ಮಾಡಿದ್ದಾರೆ.





