Mysore
24
clear sky

Social Media

ಭಾನುವಾರ, 19 ಏಪ್ರಿಲ 2026
Light
Dark

ಹನೂರು| ಕಾಡಾನೆ ದಾಳಿ: ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಳ್ಳಿಕಾರ್‌ ಹೋರಿ ಸಾವು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಜಮೀನಿನ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಳ್ಳಿಕಾರ್ ಹೋರಿಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗಂಗನದೊಡ್ಡಿ ಗ್ರಾಮದಲ್ಲಿ ಜರುಗಿದೆ.

ತಾಲ್ಲೂಕಿನ ಗಂಗನದೊಡ್ಡಿ ಗ್ರಾಮದ ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಮೃತ ಹೋರಿಯ ಮಾಲೀಕರಾಗಿದ್ದಾರೆ.

ಘಟನೆಯ ವಿವರ: ಅಮ್ಜದ್ ಖಾನ್ ತನ್ನ ತೋಟದ ಮನೆಯ ಸಮೀಪದ ಜಮೀನಿನಲ್ಲಿ ತಾನು ಸಾಕಿದ ಹೋರಿಯನ್ನು ಕಟ್ಟುಹಾಕಿದ್ದರು. ಶುಕ್ರವಾರ ತಡರಾತ್ರಿ ಕಾಡಾನೆ ಏಕಾಏಕಿ ದಾಳಿ ನಡೆಸಿ ಹೋರಿಯ ಮೇಲೆ ಹಲ್ಲೆ ನಡೆಸಿ ಎತ್ತಿ ಬಿಸಾಕಿದೆ. ಪರಿಣಾಮ ಹೋರಿ ಸ್ಥಳದಲ್ಲೇ ಹಸು ನೀಗಿದೆ. ಸುಮಾರು 40 ಸಾವಿರ ಬೆಲೆಬಾಳುವಂತಹ ಹೋರಿ ಮೃತಪಟ್ಟಿದ್ದು ರೈತ ಅಮ್ಜದ್ ಖಾನ್‌ಗೆ ತುಂಬಲಾರದ ನಷ್ಟವಾಗಿದೆ.

ಕಾಡಾನೆ ದಾಳಿ ನಿರಂತರ: ಗಂಗನ ದೊಡ್ಡಿ ಗ್ರಾಮದ ಆಸು ಪಾಸಿನಲ್ಲಿ ಕಾಡಾನೆ ನಿರಂತರವಾಗಿ ದಾಳಿ ನಡೆಸುತ್ತಿದ್ದು, ರೈತರ ಜಮೀನುಗಳಿಗೆ ದಿನನಿತ್ಯ ಲಗ್ಗೆ ಇಡುತ್ತಿವೆ. ಒಂದಲ್ಲ ಒಂದು ಬೆಳೆ ನಾಶ ಮಾಡುತ್ತಿದೆ. ಜೊತೆಗೆ ಸಾಕು ಪ್ರಾಣಿಗಳನ್ನು ಕೊಂದು ಹಾಕುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನಾಹುತವಾಗುವ ಮುನ್ನ ಕಾಡಾನೆಯನ್ನು ಸೆರೆಹಿಡಿದು ಬೇರೆ ಕಡೆ ಸ್ಥಳಾಂತರ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಒತ್ತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿ ವಿನಾಯಕ ಹಾಗೂ ಅರಣ್ಯ ರಕ್ಷಕ ಭೀಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!