Mysore
19
scattered clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಕಾಡಾನೆ ದಾಳಿ: ಪ್ರಾಣಾಪಾಯದಿಂದ ಪಾರಾದ ರೈತ

ಮಹೇಂದ್ರ ಹಸಗೂಲಿ 

ಗುಂಡ್ಲುಪೇಟೆ: ತಾಲ್ಲೂಕಿನ ಕುರುಬರಹುಂಡಿ ಗ್ರಾಮದ ರೈತ ರೇಚಣ್ಣ ಎಂಬುವವರು ರಾತ್ರಿ ಜಮೀನಿಗೆ ಕಾವಲಿಗಾಗಿ ತೆರಳುವಾಗ ಕಾಡಾನೆ ದಾಳಿ ನಡೆಸಿದೆ. ಕಾಡಾನೆಯಿಂದ ತಪ್ಪಿಸಿಕೊಳ್ಳುವಾಗ ಕೆಳಗೆ ಬಿದ್ದ ರೈತ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.

ಕಾಡಾನೆ ರೈತನ ಬೈಕ್ ತುಳಿದು ಜಖಂ ಮಾಡಿದ್ದು, ಅದೃಷ್ಟವಶಾತ್ ಅನ್ನದಾತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಂತರ ಆನೆ ಅದೇ ಗ್ರಾಮದ ಕುಮಾರ್ ಎಂಬುವವರ ಜಮೀನಿನಲ್ಲಿ ಅಳವಡಿಸಿದ್ದ ಸೋಲಾರ್ ಸುತ್ತುಬೇಲಿಯನ್ನು ತುಳಿದು ನಾಶ ಮಾಡಿದೆ.

ಘಟನೆ ನಡೆಯುತ್ತಿದ್ದಂತೆ ಕುರುಬರಹುಂಡಿ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕಾಗಮಿಸಿದ ಆರ್‌ಎಫ್ಓ ಸತೀಶ್ ರೈತರ ಮನವೊಲಿಕೆ ಮಾಡಲು ಪ್ರಯತ್ನಿಸಿದರು. ಆದರೂ ರೈತರು ಸ್ಥಳಕ್ಕೆ ಮೇಲಾಧಿಕಾರಿಗಳು ಬರುವಂತೆ ಪಟ್ಟುಹಿಡಿದರು. ನಂತರ ಬೈಕ್ ರಿಪೇರಿ ಮಾಡಿಸಿಕೊಡುವಂತೆ ಹಾಗೂ ಗಾಯಾಳುವಿಗೆ ಚಿಕಿತ್ಸೆ ನೀಡಲು ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು.

ಕುರುಬರಹುಂಡಿ ಮಂಚಹಳ್ಳಿ ಭಾಗದಲ್ಲಿ ಪದೇ ಪದೇ ಕಾಡಾನೆಗಳು ದಾಳಿ ನಡೆಸುತ್ತಿದ್ದು, ಸೋಲಾರ್ ಸುತ್ತು ಬೇಲಿ ಮತ್ತು ರೈತರು ಕಷ್ಟಪಟ್ಟು ಬೆಳೆದ ಫಸಲುಗಳನ್ನು ನಾಶ ಮಾಡುತ್ತಿವೆ. ಅರಣ್ಯ ಇಲಾಖೆ ಕಾಡಾನೆ ನಿಯಂತ್ರಣಕ್ಕೆ ಕಾವಲು ಮಾಡಬೇಕು. ಇಲ್ಲ ರೈಲ್ವೆ ಕಂಬಿ ಅಳವಡಿಸಬೇಕು. ಟ್ರಂಚ್‌ಗಳನ್ನು ತೋಡುವ ಮೂಲಕ ಕಾಡಾನೆಗಳ ದಾಳಿಯನ್ನು ನಿಯಂತ್ರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

Tags:
error: Content is protected !!