ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು, ದೇಪಾಪುರ ಗ್ರಾಮದ ಹೊರವಲಯದಲ್ಲಿ ಹುಲಿಯೊಂದು ಬೋನಿಗೆ ಬಿದ್ದಿದೆ.
ಹುಲಿಯನ್ನು ನೋಡಲು ಗ್ರಾಮಸ್ಥರು ಕಿಕ್ಕಿರಿದು ಸೇರಿದ್ದಾರೆ. ಜನರನ್ನು ನೋಡಿ ಹುಲಿ ಕೂಡ ಘರ್ಜನೆ ಮಾಡಿದೆ. ಈ ಹುಲಿ ಘರ್ಜನೆ ಹಾಗೂ ಹಾರಾಟವನ್ನು ನೋಡಿ ಜನರು ಕೂಡ ಬೆಚ್ಚಿಬಿದ್ದಿದ್ದಾರೆ.
ಕಳೆದ ಎರಡು ಮೂರು ತಿಂಗಳಿನಿಂದ ಆಗಾಗ ಕಾಣಿಸಿಕೊಂಡು ಭಯ ಹುಟ್ಟಿಸಿದ್ದ ಹುಲಿಯು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ.
ಹುಲಿ ಬೋನಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.





