ಗುಂಡ್ಲುಪೇಟೆ : ಅಕ್ರಮವಾಗಿ ಕೊಯ್ದು ಸಂಗ್ರಹಿಸಿದ್ದ ತೇಗದ ಮರಗಳನ್ನು ಅರಣ್ಯ ಇಲಾಖೆಯು ಜಪ್ತಿ ಮಾಡಿರುವ ಘಟನೆ ತಾಲ್ಲೂಕಿನ ಅಣ್ಣೂರು ಗ್ರಾಮದ ಜಮೀನಿನಲ್ಲಿ ನಡೆದಿದೆ.
ತಾಲ್ಲೂಕಿನ ಅಣ್ಣೂರು ಕೇರಿ ಗ್ರಾಮದ ಸುನಿಲ್‌ರವರ ಜಮೀನಿನಲ್ಲಿ ಮಾದಪ್ಪ ಎಂಬವರು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಬೇರೆಡೆ ತೇಗದ ಮರಗಳನ್ನು ಖರೀದಿಸಿ ಕೊಯ್ದು ಸಂಗ್ರಹಿಸಿಟ್ಟಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿ, ಸಂಗ್ರಹಿಸಿದ್ದ ತೇಗದ ಮರಗಳನ್ನು ಜಪ್ತಿ ಮಾಡಿದ್ದಾರೆ.
ಅನುಮತಿ ಪಡೆಯದ ಹಿನ್ನೆಲೆಯಲ್ಲಿ 10ಕ್ಕೂ ಅಧಿಕ ತೇಗದ ಮರಗಳನ್ನು ಜಪ್ತಿ ಮಾಡಲಾಗಿದ್ದು, ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಬಫರ್ ಜೊನ್ ವಲಯ ಅರಣ್ಯಧಿಕಾರಿ ಶಿವಕುಮಾರ್ ತಿಳಿಸಿದರು.





