ಚಾಮರಾಜನಗರ:- ವಾಹನಗಳನ್ನು ಚೆಕ್ ಪೋಸ್ಟ್ ಸಿಬ್ಬಂದಿ ತಡೆಗಟ್ಟುವುದು ಸಾಮಾನ್ಯ. ಆದರೆ, ತಮಿಳುನಾಡು ಮತ್ತು ಕರ್ನಾಟಕ ಗಡಿಯಾದ ಚಾಮರಾಜನಗರ ಗಡಿ ಭಾಗವಾದ ಹಾಸನೂರಿನಲ್ಲಿ ಗಜಪಡೆ ಗಡಿಯನ್ನು ಬಂದ್ ಮಾಡಿದ ಘಟನೆ ನಡೆದಿದೆ.
ಸುಮಾರು8-10 ಆನೆಗಳ ಹಿಂಡುಚೆಕ್ ಪೋಸ್ಟ್ ಬಳಿ ಬೀಡು ಬಿಟ್ಟು ಅತ್ತಿತ್ತಜರುಗದ ಹಿನ್ನೆಲೆ 1 ಗಂಟೆಗಳ ಕಾಲ ಎರಡು ಬದಿ ವಾಹನ ಸವಾರರು ಮೂಕಪ್ರೇಕ್ಷಕರಾಗಿ ನಿಲ್ಲಬೇಕಾಯಿತು.
ಒಂದು ಗಂಟೆಯ ನಂತರ ಆನೆಗಳು ಚೆಕ್ ಪೋಸ್ಟ್ ಅನ್ನು ಬಿಟ್ಟುಹೋದವು, ಬಳಿಕ ಸಂಚಾರ ಆರಂಭವಾಗಿದೆ. ಕಬ್ಬಿನ ಲಾರಿಗಳನ್ನು ತಡೆಯುತ್ತಿದ್ದ ಆನೆಹಿಂಡು ಇಂದು ಚೆಕ್ ಪೋಸ್ಟ್ ಗೆ ದಾಳಿ ಮಾಡಿ ವಾಹನ ಸವಾರರನ್ನು ಕಂಗೆಡೆಸಿದೆ.




