Mysore
16
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ರಾಜ್ ಹುಟ್ಟುಹಬ್ಬ | ಸಚಿವ ಸಂಪುಟ ಸಭೆಗೂ ಮುನ್ನ ಅಣ್ಣವ್ರಗೆ ಗೌರವ

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ, ವರನಟ ಡಾ.ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಮಾಡಿದೆ.

ಸಚಿವ ಸಂಪುಟ ಸಭೆಯ ಸಭಾಂಗಣದ ಪಕ್ಕದಲ್ಲಿ ಸಿದ್ಧಪಡಿಸಿರುವ ಮಾಧ್ಯಮ ಗೋಷ್ಠಿ ಸ್ಥಳದಲ್ಲಿ ರಾಜ್‌ ಕುಮಾರ್ ಅವರ ಫೋಟೊ ಇಟ್ಟು ಪುಷ್ಪಾಲಂಕಾರ ಮಾಡಲಾಗಿದೆ. ಈ ಮೂಲಕ ಜನ್ಮದಿನದ ಅಂಗವಾಗಿ ವರನಟನನ್ನು ಗೌರವಿಸುವ ಕಾರ್ಯ ನಡೆದಿದೆ. ರಾಜ್ ಕುಮಾರ್ ಅವರು ಚಾಮರಾಜನಗರ ಜಿಲ್ಲೆಯವರೇ ಆಗಿರುವುದರಿಂದ ವಿಶೇಷ ನಮನವನ್ನು ಸಲ್ಲಿಸಲಾಗಿದೆ.

Tags:
error: Content is protected !!