Mysore
22
overcast clouds
Light
Dark

ಕಾರಿನ ಟೈರ್‌ ಸ್ಪೋಟ: ಶಾಸಕ ಎ.ಆರ್‌ ಕೃಷ್ಣಮೂರ್ತಿ ಪ್ರಾಣಪಾಯದಿಂದ ಪಾರು!

ಚಾಮರಾಜನಗರ: ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ತಮ್ಮ ಕ್ಷೇತ್ರದಿಂದ ಮೈಸೂರಿನ ಮನೆಗೆ ವಾಪಾಸಾಗುವ ವೇಳೆ ಕಾರಿನ ಟೈರ್‌ ಸ್ಪೋಟಗೊಂಡು ಅಪಘಾತಕ್ಕೀಡಾದ ಘಟನೆ ನಡದಿದೆ.

ಕೊಳ್ಳೇಗಾಲ ಕ್ಷೇತ್ರದಿಂದ ಚುನಾವಣಾ ಪ್ರಚಾರ ಮುಗಿಸಿ ರಾತ್ರಿ 11-48 ರ ಸಮಯದಲ್ಲಿ ಮೈಸೂರಿನ ಕಡೆ ಪ್ರಯಾಣ ಮಾಡುವಾಗ ಮೈಸೂರಿನ ನಾಡನಹಳ್ಳಿ ಶಾಸಕರ ಕಾರ್ ಟೈರ್ ಸ್ಪೋಟಗೊಂಡಿದೆ. ಕಾರಿನಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಶಾಸಕರ ಆಪ್ತ ಸಹಾಯಕ ಚೇತನ್ ಮತ್ತು ವಾಹನ ಚಾಲಕ ಸತೀಶ್ ಅಪಾಯದಿಂದ ಪಾರಾಗಿದ್ದಾರೆ.