Mysore
27
overcast clouds

Social Media

ಮಂಗಳವಾರ, 12 ಮೇ 2026
Light
Dark

ವ್ಯಕ್ತಿಯ ಭೀಕರ ಕೊಲೆ : ಹಳೇ ವೈಷಮ್ಯ ಹಿನ್ನೆಲೆ ಪತಿ,ಪತ್ನಿಯಿಂದ ಕೃತ್ಯ

ಕೊಳ್ಳೇಗಾಲ : ಹಳೇ ವೈಷಮ್ಯ ಹಿನ್ನೆಲೆ ವ್ಯಕ್ತಿಯೋರ್ವನನ್ನು ಪತಿ ಪತ್ನಿ ಇಬ್ಬರು ಮಾರಕಾಸ್ತ್ರದಿಂದ ಹೊಡೆದು ಭೀಕರವಾಗಿ ಹತ್ಯೆಗೈದಿರುವ ಘಟನೆ ತಾಲ್ಲೂಕಿನ ಚನ್ನೀಪುರದೊಡ್ಡಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ.

ಚನ್ನೀಪುರದೊಡ್ಡಿ ಗ್ರಾಮದ ಹಾಲಿನ ಡೈರಿ ಕಾರ್ಯದರ್ಶಿ ಹಾಗೂ ವ್ಯವಸಾಯ ಮಾಡುತ್ತಿದ್ದ ಉಮೇಶ್(50) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಸ್ವಾಮಿಗೌಡ(60) ಹಾಗೂ ನಾಗಮ್ಮ(50) ಎನ್ನುವರು ಕೊಲೆ ಮಾಡಿದ ಆರೋಪಿ.

ಚನ್ನೀಪುರ ಗ್ರಾಮದಲ್ಲಿ ಹಾಲಿನ ಡೈರಿ ಇಟ್ಟಿದ್ದ ಉಮೇಶ್ ಎನ್ನುವನು ಆರೋಪಿ ಸ್ವಾಮಿಗೌಡನಿಗೆ ಹಿಂದೆ ಒಂದು ಲಕ್ಷ ಹಣವನ್ನು ವಯಕ್ತಿಕವಾಗಿ ನೀಡಿದ್ದನು‌. ಕಳೆದ ಒಂದು ವರ್ಷದಿಂದ ಉಮೇಶ್ ನ ಡೈರಿಗೆ ಹಾಲು ಹಾಕದೇ ಪಕ್ಕದ ಹೊಸಹಳ್ಳಿ ನಿಂಗಯ್ಯದೊಡ್ಡಿ ಗ್ರಾಮದ ಡೈರಿ ಹಾಲು ಹಾಕುತ್ತಿದ್ದನು. ಮೊನ್ನೆ ತಾನು ನೀಡಿದ್ದ ಹಣವನ್ನು ಕೇಳಲು ಹೋಗಿದ್ದ ಉಮೇಶ್ ನ ಜೊತೆ ಆರೋಪಿ ಗಲಾಟೆ ಮಾಡಿದ್ದನು.

ಇಂದು ಮಧ್ಯಾಹ್ನ ಉಮೇಶ್ ಆರೋಪಿ ಮನೆ ಮುಂದೆ ನಡೆದುಕೊಂಡು ಹೋಗುವಾಗ ಆರೋಪಿ ಸ್ವಾಮಿಗೌಡ ಹಾಗೂ ಆತನ ಹೆಂಡತಿ ನಾಗಮ್ಮ ಇವರಿಬ್ಬರು ಉಮೇಶ್ ನ ಮೇಲೆ ಗಲಾಟೆ ಮಾಡಿ ಲಾಂಗ್ ಮಚ್ಚು ಮಾರಕಾಸ್ತ್ರದಿಂದ ತಲೆ ಹಾಗೂ ಕತ್ತು ಭಾಗಕ್ಕೆ ಹೊಡೆದು ಪಕ್ಕದ ಚಾನಲ್ ಗೆ ಬಿಸಾಡಿದ್ದಾನೆ.

ಗಲಾಟೆ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಮಹದೇವ ಚಾನಲ್ ಬಿದ್ದಿದ್ದ ಉಮೇಶ್ ನನ್ನು ನೋಡಿದಾಗ ಉಸಿರಾಡುವುದನ್ನು ಕಂಡು ತಕ್ಷಣ ಕಾರಿನಲ್ಲಿ ಗಾಯಾಳುವನ್ನು ಕೊಳ್ಳೇಗಾಲ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ. ವಿಚಾರ ತಿಳಿದು ಆಸ್ಪತ್ರೆಗೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಭೇಟಿ ನೀಡಿ ಬಳಿಕ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತ್ತೆಗೆ ಬಲೆಬೀಸಿದ್ದಾರೆ. ಮೃತ್ತದೇಹವನ್ನು ಚಾ.ನಗರ ಸಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದ್ದು ನಾಳೆ ಮರಣೋತ್ತರ ಪರೀಕ್ಷೆ ನಡೆಯಲಿದೆ.

Tags:
error: Content is protected !!