ಹನೂರು : ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಆಣೆ ಹೊಲ ಹಾಗೂ ಕರಡಿ ಸೀಳು ಪ್ರದೇಶದಲ್ಲಿ ಕಾಡಾನೆಗಳ ದಾಳಿಗೆ ರೈತರು ಬೆಳೆದಿದ್ದ ಮಾವಿನಹಣ್ಣು, ಹಲಸು, ಬಾಳೆ ಬೆಳೆ ನಾಶವಾಗಿದೆ. ಇದರಿಂದ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ.
ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಣೆ ಹೊಲ ಗ್ರಾಮದ ಮಾದಯ್ಯ ಎಂಬುವರು ತಮ್ಮ ಜಮೀನಿನಲ್ಲಿ ಬಾಳೆಹಲಸು ಮಾವಿನ ಹಣ್ಣು ಪಡೆದಿದ್ದರು. ಕಳೆದ ಮೂರು ದಿನಗಳಿಂದ ಕಾಡಾನೆಗಳ ಹಿಂದು ನಿರಂತರವಾಗಿ ದಾಳಿ ಮಾಡುತ್ತಿರುವುದರಿಂದ ಒಂದು ಸಾವಿರಕ್ಕೂ ಹೆಚ್ಚು ಮಾವಿನಹಣ್ಣು, ನೂರಕ್ಕೂ ಹೆಚ್ಚು ಹಲಸಿನ ಹಣ್ಣು, ಹತ್ತಕ್ಕೂ ಹೆಚ್ಚು ಬಾಳೆಗೊನೆ ತಿಂದು ತುಳಿದು ನಾಶಪಡಿಸಿದೆ.
ಈ ಸಂಬಂಧ ಕಳೆದ ಒಂದು ತಿಂಗಳಿನಿಂದಲೂ ಮಲೆ ಮಾದೇಶ್ವರ ಬೆಟ್ಟ ಸುತ್ತಮುತ್ತಲಿನ ಗ್ರಾಮಗಳ ಸಮೀಪವೇ ಒಂಟಿ ಸಲಗ ಒಂದು ದಾಳಿ ಮಾಡುತ್ತಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಡಾನೆಗಳ ಹಾವಳಿ ನಿಯಂತ್ರಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ, ಮುಂದಿನ ದಿನಗಳಲ್ಲಾದರೂ ಕಾಡುಪ್ರಾಣಿಗಳ ಹಾವಳಿ ತಪ್ಪಿಸುವಂತೆ ಮನವಿ ಮಾಡಿದ್ದಾರೆ. ಬಾಳೆ, ಮಾವು ಹಲಸು ನಷ್ಟವಾಗಿರುವ ಹಿನ್ನೆಲೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.





