ದಾವಣಗೆರೆ: ದಾವಣಗೆರೆಯ ಕುವೆಂಪು ಕನ್ನಡ ಭವನ, ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವ 2024 ಕಾರ್ಯಕ್ರಮದಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ಯುವಕವಿ ಕೃಷ್ಣಮೂರ್ತಿ ಗಣಿಗನೂರು ಅವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಹಿತ್ಯ ಕ್ಷೇತ್ರ, ಜಾನಪದ ಕ್ಷೇತ್ರಗಳಲ್ಲಿನ ಸಾಧನೆಯನ್ನು ಪರಿಗಣಿಸಿ ಹಾಗೂ ಕೃಷ್ಣಮೂರ್ತಿ ಗಣಿಗನೂರು ಅವರ ಅಕ್ಕರೆಗೆ ಮತ್ತೊಂದು ಹೆಸರೇ ಅವಳು ಎಂಬ ಗ್ರಾಮೀಣ ಸೊಗಡಿನ ಕೃತಿಗೆ ಸುವರ್ಣ ಕರ್ನಾಟಕ ಕಣ್ಮಣಿ ಎಂಬ ರಾಜ್ಯ ಪ್ರಶಸ್ತಿಯನ್ನು ನೀಡಲಾಗಿದೆ.
ಖ್ಯಾತ ಸಾಹಿತಿಗಳಾದ ಡಾ. ಕಬ್ಬಿನಲ್ಲಿ ವಸಂತ ಭಾರದ್ವಾಜ ಮತ್ತು ಗಣೇಶ ಶಾಣೈ ಅವರಿಂದ ಪ್ರಶಸ್ತಿ ಪ್ರಧಾನ ನಡೆಯಿತು. ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕೃಷ್ಣ ಅವರ ಕವಿತೆಯನ್ನು ವಾಚನ ಮಾಡಿ ಕೃತಿ ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಹೇಮಾ ಪಟ್ಟಣ ಶೆಟ್ಟಿ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಕೆ.ಎಚ್ ಮಂಜುನಾಥ್, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಕಲಾಕುಂಚ ಮಹಿಳಾ ವಿಭಾಗ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶಣೈ, ಹೇಮಾ ಶಾಂತಪ್ಪ ಪೂಜಾರಿ ಹಾಜರಿದ್ದರು.