ಕೊಳ್ಳೇಗಾಲ : ಗ್ರಾಮಾಂತರ ಪೊಲೀಸರು ಮತ್ತು ಆಹಾರ ಇಲಾಖೆಯವರು ಜಂಟಿ ಕಾರ್ಯಾಚರಣೆ ನಡೆಸಿ ಪಾಳ್ಯ ಗ್ರಾಮದಲ್ಲಿ ಸುಬ್ಬನಾಯಕ ಎಂಬವರ ಮನೆಯಲ್ಲಿ 14 ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ 743 ಕೆಜಿ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿ ಪರಾರಿಯಾಗಿದ್ದಾನೆ. ಈತನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ದಾಳಿಯಲ್ಲಿ ಆಹಾರ ನಿರೀಕ್ಷಕ ಪ್ರಸಾದ್, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಸುಪ್ರೀತ್, ಎಎಸ್‌ಐ ಮಧು ಕುಮಾರ್, ಡಿವೈಎಸ್ಪಿ ಅಪರಾಧ ಪತ್ತೆದಳ ಎಎಸ್‌ಐ ತಖೀಉಲ್ಲಾ, ಹೆಚ್.ಸಿ ರವಿಕುಮಾರ್, ವೆಂಕಟೇಶ್, ಬಿಳಿಗೌಡ ಭಾಗವಹಿಸಿದ್ದರು.





