Mysore
24
overcast clouds

Social Media

ಗುರುವಾರ, 01 ಮೇ 2025
Light
Dark

ಹನೂರು: ಹೆಜ್ಜೇನು ದಾಳಿಗೆ ರೈತ ಬಲಿ

ಚಾಮರಾಜನಗರ/ಹನೂರು: ಹೆಜ್ಜೇನು ದಾಳಿಗೆ ತುತ್ತಾಗಿ ರೈತನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಹನೂರು ತಾಲೂಕಿನ ಬೆಳ್ಳತ್ತೂರು ಗ್ರಾಮದಲ್ಲಿ ಸೋಮವಾರ (ಮೇ.20) ನಡೆದಿದೆ.

ಮೃತ ರೈತರನ್ನು 45 ವರ್ಷದ ತುಳಸಿದಾಸ್‌ ಎಂದು ಗುರುತಿಸಲಾಗಿದೆ. ಸೋಮವಾರ ಬೆಳ್ಳತ್ತೂರಿನಲ್ಲಿರು ತಮ್ಮ ಜಮೀನಿನಲ್ಲಿ ಬೆಳೆದಿರುವ ಜೋಳದ ಫಸಲಿಗೆ ತಮ್ಮ ಪತ್ನಿ ಆಶಾ ಜತೆಗೂಡಿ ಔಷಧಿ ಸಿಂಪಡಿಸುತ್ತಿರುವ ವೇಳೆ ಹೆಜ್ಜೇನು ದಾಳಿ ನಡೆಸಿದೆ.

ಈ ದಾಳಿಯಿಂದ ತುಳಸಿದಾಸ್‌ ಸ್ಥಳದಲ್ಲೇ ಮೃತಪಟ್ಟರೆ, ಅವರ ಪತ್ನಿ ಆಶಾಗೆ ಗಂಭೀರವಾಗಿ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Tags: