ಹನೂರು: ಕಾವೇರಿ ಹೊರಹರಿವು ಹೆಚ್ಚುತ್ತಿದ್ದಂತೆ ಕರ್ನಾಟಕ- ತಮಿಳುನಾಡು ಜಲಗಡಿಯಾಗಿರುವ ಹನೂರು ತಾಲ್ಲೂಕಿನ ಹೊಗೇನಕಲ್ ಜಲಪಾತ ಮೈದುಂಬಿ ಹರಿಯುತ್ತಿದೆ.
ಕಾವೇರಿ ಕೊಳ್ಳದಲ್ಲಿ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ನದಿಯ ಹೊರಹರಿವು ಹೆಚ್ಚಾಗಿದೆ. ಪರಿಣಾಮ ಹೊಗೇನಕಲ್ ಜಲಪಾತಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಕಲ್ಲು ಬಂಡೆಗಳ ನಡುವೆ ಜಲ ವೈಯ್ಯಾರ ಸೃಷ್ಟಿಯಾಗಿದ್ದು, ನೀರಿನ ಪ್ರಮಾಣ ಏರುಗತಿಯಲ್ಲಿರುವುದರಿಂದ ತಮಿಳುನಾಡು ಮತ್ತು ಕರ್ನಾಟಕ ಎರಡೂ ಭಾಗದಲ್ಲೂ ಜಲಪಾತದ ಅದ್ಭುತ ದೃಶ್ಯಗಳು ನೋಡಲು ಸಿಗುತ್ತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕ, ತಮಿಳುನಾಡು ಎರಡೂ ಭಾಗದಲ್ಲಿ ಬೋಟಿಂಗ್‌ಗೆ ನಿರ್ಬಂಧ ಹೇರಿದ್ದು, ನೀರಿನ ರಭಸ ಕಡಿಮೆಯಾದರಷ್ಟೇ ನಿರ್ಬಂಧ ತೆರವಾಗಲಿದೆ.
ಜಲ ವೈಯ್ಯಾರ ನೋಡಲೆಂದೇ ಹೊಗೇನಕಲ್‌ಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.





