Mysore
33
scattered clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಹನೂರು | ಕಾಡಾನೆಗಳ ದಾಂಧಲೆ ; ಮೆಕ್ಕೆಜೋಳ ನಾಶ

ಹನೂರು: ಒಕ್ಕಣೆ ಮಾಡಲು ಕಟಾವು ಮಾಡಿ ಕಣದಲ್ಲಿ ಹಾಕಿದ್ದ ಮೆಕ್ಕೆಜೋಳವನ್ನು ಕಾಡಾನೆಗಳ ಹಿಂಡು ತಿಂದು ನಾಶ ಮಾಡಿರುವ ಘಟನೆ ಪಿ.ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಮನ ಕತ್ತರಿ ಗ್ರಾಮದಲ್ಲಿ ನಡೆದಿದೆ.

ರಾಬರ್ಟ್ ಎಂಬವವರ 3 ಎಕರೆ ಜಮೀನನ್ನು ಮಹದೇವಸ್ವಾಮಿ ಎಂಬುವವರು ಗುತ್ತಿಗೆ ಪಡೆದು ಉತ್ತಮವಾಗಿ ಜೋಳದ ಫಸಲನ್ನು ಬೆಳೆದಿದ್ದರು. ಕಳೆದ ಎರಡು ದಿನಗಳಿಂದ ಮಳೆಯಿದ್ದ ಹಿನ್ನೆಲೆ ಜೋಳದ ಫಸಲನ್ನು ಮನೆಯ ಮುಂಭಾಗ ಮೆದೆ ಹಾಕಿದ್ದರು. ಆದರೆ ಸಮೀಪದ ಅರಣ್ಯ ಪ್ರದೇಶದಿಂದ ಮೇವನ್ನರಸಿ ಆಗಮಿಸಿದ ಕಾಡಾನೆಗಳ ಹಿಂಡು ಒಕ್ಕಣೆ ಕಣದಲ್ಲಿದ್ದ ಸುಮಾರು ೧೦ ಕ್ವಿಂಟಾಲ್ ಗೂ ಹೆಚ್ಚು ಜೋಳವನ್ನು ತಿಂದು ನಾಶ ಮಾಡಿದೆ. ನೊಂದ ರೈತ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಕಳೆದ ಹಲವಾರು ದಿನಗಳಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಕಡಿವಾಣ ಹಾಕುವಂತೆ ಎಷ್ಟೇ ಮನವಿ ಮಾಡಿದ್ದರು ಇದುವರೆಗೂ ಪ್ರಯೋಜನವಾಗಿಲ್ಲ. ಇನ್ನೂ ಮುಂದಾದರೂ ಕಾಡುಪ್ರಾಣಿಗಳ ಉಪಟಳಕ್ಕೆ ಕಡಿವಾಣ ಹಾಕುವಂತೆ ರೈತರು ಮನವಿ ಮಾಡಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಕಷ್ಟಪಟ್ಟು 3 ಎಕರೆ ಜಮೀನಿನಲ್ಲಿ ಜೋಳ ಬೆಳೆಯಲಾಗಿತ್ತು. ಮಳೆ ಇದ್ದ ಹಿನ್ನೆಲೆ ಜೋಳ ಬಿಡಿಸಿರಲಿಲ್ಲ. ಕಾಡಾನೆಗಳ ಹಿಂಡು ಜೋಳದ ಫಸಲು ತಿಂದು ನಾಶ ಮಾಡಿ ಸುಮಾರು ಒಂದು ಲಕ್ಷಕ್ಕೆ ಹೆಚ್ಚು ನಷ್ಟ ಉಂಟು ಮಾಡಿದೆ. ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಇಲಾಖೆಯಿಂದ ಸೂಕ್ತ ಪರಿಹಾರ ಕೊಡಿಸಬೇಕು. ಮಹದೇವಸ್ವಾಮಿ ನೊಂದ ರೈತ

Tags: