Mysore
27
overcast clouds

Social Media

ಭಾನುವಾರ, 22 ಮಾರ್ಚ್ 2026
Light
Dark

ಹನೂರು | ಮ.ಬೆಟ್ಟ ವನ್ಯಜೀವಿ ವಿಭಾಗದಲ್ಲಿ ಹೆಣ್ಣಾನೆ ಮೃತ ದೇಹ ಪತ್ತೆ

elephent news

ಹನೂರು : ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ರಾಮಪುರ ವನ್ಯಜೀವಿ ವಲಯದ ಕೌದಳ್ಳಿ ಶಾಖೆಯ ಕುರಟ್ಟಿ ಹೊಸೂರು ಸಮೀಪದ ದೊಡ್ಡಬಾಗೆಮರದ ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆಯ ಮೃತ ದೇಹ ಪತ್ತೆಯಾಗಿದೆ.

ರಾಮಪುರ ವನ್ಯಜೀವಿ ವಲಯದ ಕೌದಳ್ಳಿ ಶಾಖೆಯ ಕುರಟ್ಟಿ ಹೊಸೂರು ಗಸ್ತಿನ ಸಿಪಿಟಿ ನಂಬರ್ 47ರ ದೊಡ್ಡಬಾಗೆಮರದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಗಸ್ತು ನಡೆಸುತ್ತಿದ್ದಾಗ ಆನೆ ಮೃತಪಟ್ಟಿರುವುದು ತಿಳಿದು ಬಂದಿದೆ. ತಕ್ಷಣ ಎಸಿಎಫ್ ಉಮಾಪತಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಶ್ರೀರಂಗಪಟ್ಟಣ ದಸರಾ ಉದ್ಘಾಟಿಸಲಿರುವ ನಿರ್ದೇಶಕ ನಾಗಭರಣ : 25 ರಂದು ಉದ್ಘಾಟನೆ

ಮೃತ ಹೆಣ್ಣಾನೆಗೆ ಸುಮಾರು 10 ರಿಂದ 12 ವರ್ಷ ವಯಸ್ಸಾಗಿದೆ ಎಂದು ಅಂದಾಜಿಸಲಾಗಿದೆ. ಮೇಲ್ನೋಟಕ್ಕೆ ಹೆಣ್ಣಾನೆಯೂ ಸ್ವಾಭಾವಿಕವಾಗಿ ಮೃತಪಟ್ಟಿರಬಹುದು ಎಂದು ತಿಳಿದುಬಂದಿದೆ.

ರಾಮಪುರ ವಲಯ ಅರಣ್ಯ ಅಧಿಕಾರಿಗಳು ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ ಇಲಾಖೆಯ ನಿಯಮದಂತೆ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವರದಿ ಬಂದ ನಂತರ ಆನೆಯ ಸಾವಿಗೆ ನಿಖರ ಮಾಹಿತಿ ತಿಳಿಯಲಿದೆ.

Tags:
error: Content is protected !!