ಗುಂಡ್ಲುಪೇಟೆ: ತಾಲ್ಲೂಕಿನ ರಾಘವಾಪುರ ಗ್ರಾಮದಲ್ಲಿ ಶ್ರೀ ಪಟ್ಟಲದಮ್ಮ ದೇವಿ ಜಾತ್ರೆ ಶನಿವಾರ, ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಶನಿವಾರ ಸಂಜೆ ಗ್ರಾಮದ ಮಹದೇಶ್ವರ ದೇವಸ್ಥಾನ ದಿಂದ ಪಟ್ಟಲದಮ್ಮ ದೇವಿ ದೇವಸ್ಥಾನದವರೆಗೆ ಗಂಡಸರು ತೇರನ್ನು ಎಳೆದುಕೊಂಡು ಬಂದರು. ಭಾನುವಾರ ಸಿಂಗಾರಗೊಂಡ ತೇರನ್ನು ಮಹಿಳೆಯರು ಪಟ್ಟಲದಮ್ಮ ದೇವಸ್ಥಾನದಿಂದ ಮಹದೇಶ್ವರ ದೇವಸ್ಥಾನದವರೆಗೆ ಎಳೆದು ತಂದಿದ್ದು ವಿಶೇಷವಾಗಿತ್ತು.
ಮೊದಲಿನಿಂದಲೂ ಪಟ್ಟಲದಮ್ಮದೇವಿ ದೇವಸ್ಥಾನದಿಂದ ಮಹಿಳೆಯರು ಎಳೆಯುವುದು ಪ್ರತೀತಿ. ಗಂಡಸರು ಎಳೆದರೆ ತೇರು ಬರುವುದಿಲ್ಲ. ಹಾಗಾಗಿ ಮಹಿಳೆಯರು ಎಳೆಯುವುದು ನಡೆದುಕೊಂಡು ಬಂದಿದೆ ಎಂಬುದು ಗ್ರಾಮದವರ ಅಭಿಪ್ರಾಯವಾಗಿದೆ.