Mysore
24
light rain

Social Media

ಬುಧವಾರ, 16 ಜುಲೈ 2025
Light
Dark

ಹುಲಿ ದಾಳಿಗೆ ಜಿಂಕೆ ಬಲಿ; ಮತ್ತೊಂದೆಡೆ ಚಿರತೆ ಮರಿ ಪತ್ತೆ

ಚಾಮರಾಜನಗರ: ಜಮೀನೊಂದರಲ್ಲಿ ಮೇವು ಮೇಯುತ್ತಿದ್ದ ಜಿಂಕೆ ಮೇಲೆ ಹುಲಿ ದಾಳಿ ನಡೆಸಿದ ಪರಿಣಾಮ ಜಿಂಕೆ ಸ್ಥಳದಲ್ಲೇ ಪ್ರಾಣ ಬಿಟ್ಟ ಘಟನೆ ಗುಂಡ್ಲುಪೇಟೆಯ ಪಡಗೂರು ಗ್ರಾಮದಲ್ಲಿ ನಡೆದಿದೆ.

ಪಡಗೂರು ಗ್ರಾಮದ ಹೊರವಲಯದ ಜಮೀನಿನ ಕಡೆ ಮೇವು ಹರಸಿ ಬಂದಿದ್ದ ಜಿಂಕೆ ಮೇಲೆ ಹುಲಿ ಹಠಾತ್‌ ದಾಳಿ ನಡೆಸಿದೆ. ಇದನ್ನ ಕಂಡ ಸ್ಥಳೀಯರು ಕೂಗಿಕೊಂಡಿದ್ದು, ಪರಿಣಾಮ ಜಿಂಕೆಯನ್ನು ಅಲ್ಲೆ ಬಿಟ್ಟು ಹುಲಿ ಪರಾರಿಯಾಗಿದೆ. ಹುಲಿ ದಾಳಿಗೆ ಸಿಲುಕಿದ ಜಿಂಕೆ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.

ಚಿರತೆ ಮರಿ ಪತ್ತೆ
ಪಡಗೂರು ಗ್ರಾಮದ ಶಿವಕುಮಾರ್‌ ಎಂಬುವವರ ಕಬ್ಬಿನ ಗದ್ದೆಯಲ್ಲಿ ಜಿರತೆಯೊಂದು ತನ್ನ ಮರಿ ಬಿಟ್ಟು ಹೋಗಿದೆ. ಬೇಟೆ ಹುಡುಕಿಕೊಂಡು ತಾಯಿ ಚಿರತೆ ತೆರಳಿರುವ ಸಾಧ್ಯತೆ ಇದ್ದು, ಮರಿಗಾಗಿ ವಾಪಸ್‌ ಬರಲಿದೆ ಎಂದು ಅರಣ್ಯ ಇಲಾಖೆ ಸ್ಥಳದಲ್ಲಿ ಬೋನಿರಿಸಿದೆ. ಚಿರತೆ ಸೆರೆ ಕಾರ್ಯಚರಣೆ ಮುಂದುವರೆದಿದೆ.

ಜಮೀನಿಗೆ ತೆರಳಲು ಗ್ರಾಮಸ್ಥರ ಹಿಂದೇಟು
ಪಡಗೂರು ಗ್ರಾಮ ಒಂದರಲ್ಲೇ ಜಿಂಕೆ ಮೇಲೆ ಹುಲಿ ದಾಳಿ ಹಾಗೂ ಚಿರತೆ ಇರುವುದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಪರಿಣಾಮ ಗ್ರಾಮದ ಸುತ್ತಮುತ್ತಲಿನ ಜನರು ಜಮೀನಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

Tags:
error: Content is protected !!