Mysore
21
few clouds

Social Media

ಶನಿವಾರ, 07 ಫೆಬ್ರವರಿ 2026
Light
Dark

ರಸ್ತೆ ಬದಿಯಲ್ಲಿ ಮೃತದೇಹ ಪತ್ತೆ ; ಕೊಲೆ ಶಂಕೆ

ಗುಂಡ್ಲುಪೇಟೆ : ತಾಲ್ಲೂಕಿನ ಕಮರಹಳ್ಳಿ- ತೊಂಡವಾಡಿ ರಸ್ತೆಯ ಬದಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಹಾಲಹಳ್ಳಿ ಗ್ರಾಮದ ಸೋಮಣ್ಣ (೭೫) ಎಂದು ಗುರುತಿಸಲಾಗಿದೆ. ಇವರು ಬೇಗೂರಿನಲ್ಲಿ ವಾಸವಿದ್ದರು.

ಇವರ ಶವ ಕಮರಹಳ್ಳಿ-ತೊಂಡವಾಡಿ ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು, ಇವರ ಕುತ್ತಿಗೆಯನ್ನು ಟವೆಲ್‌ನಲ್ಲಿ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಮೃತ ಸೋಮಣ್ಣ ಅವರು ಕುತ್ತಿಗೆಯಲ್ಲಿ ಚಿನ್ನದ ಸರ ಸೇರಿದಂತೆ ಒಂದಷ್ಟು ಚಿನ್ನ ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಚಿನ್ನಾಭರಣ ದೋಚಲು ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಮತ್ತೆ ಕೆಲವರು ವೈಷಮ್ಯದಿಂದ ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದಾರೆ.

ಇದನ್ನೂ ಓದಿ:-ದಕ್ಷಿಣ ಭಾಗದ ಸಕ್ಕರೆ ಕಾರ್ಖಾನೆಗಳೂ ಹೆಚ್ಚುವರಿ ಬೆಲೆ ನೀಡಬೇಕು : ರಾಜ್ಯ ರೈತ ಸಂಘ ಆಗ್ರಹ

ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಬೇಗೂರು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!