ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಕಲ್ಲಹಳ್ಳಿ ಬಳಿ ಒಂದು ಹೆಣ್ಣು ಹುಲಿ ಹಾಗೂ ಮೂರು ಮರಿ ಹುಲಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಕಳೆದ ಹಲವಾರು ದಿನಗಳಿಂದ ಹುಲಿ ಜಾನುವಾರುಗಳ ಮೇಲೆ ದಾಳಿ ಆ ಭಾಗದ ಜನರನ್ನು ನಿದ್ದೆಗೆಡಿಸಿತ್ತು.
ಇದನ್ನು ಓದಿ: ಹುಲಿ ವಾಪಸ್ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿ : ಒಬ್ಬಂಟಿಯಾಗಿ ಓಡಾಡದಂತೆ ಅರಣ್ಯ ಇಲಾಖೆ ಮನವಿ
ಹುಲಿ ದಾಳಿಯಿಂದ ಜಮೀನುಗಳಿಗೆ ಹೋಗಲು ರೈತರು ಭಯಪಡುತ್ತಿದ್ದರು. ಹುಲಿ ದಾಳಿಯಿಂದ ರೋಸಿ ಹೋಗಿದ್ದ ರೈತರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಜನರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಿ, ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಸೆರೆ ಹಿಡಿದಿದ್ದಾರೆ. ಹುಲಿಗಳನ್ನು ಸೆರೆ ಹಿಡಿದ ಬಳಿಕ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.





