ಗುಂಡ್ಲುಪೇಟೆ : ತಾಲೂಕಿನಲ್ಲಿ ಪ್ರಾಣಿಗಳು ಆಗಾಗ ದರ್ಶನ ಕೊಟ್ಟು ಪ್ರವಾಸಿಗರನ್ನು ಪುಳಕಿತರನ್ನಾಗಿ ಮಾಡುತ್ತಿರುತ್ತವೆ. ಅಲ್ಲದೇ, ಇಂತಹ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲೂ ಭಾರಿ ವೈರಲ್ ಆಗುತ್ತಿರುತ್ತವೆ. ಹಾಗೆಯೇ ಇದೀಗ ಬಂಡೀಪುರದಲ್ಲಿ ಹುಲಿಯೊಂದು ಸಫಾರಿಗರಿಗೆ ದರ್ಶನ ಕೊಟ್ಟು ಪುಳಕಿತರನ್ನಾಗಿ ಮಾಡಿದೆ.
ಬಂಡೀಪುರ ಸಫಾರಿಯಲ್ಲಿ ಸಫಾರಿಗರ ವಾಹನಕ್ಕೆ ಹುಲಿಯೊಂದು ಅಡ್ಡಲಾಗಿ ಬಂದಿದೆ. ಈ ಹುಲಿಯ ಜೊತೆ ಬಂದ ಇನ್ನೊಂದು ಹುಲಿರಾಯ ಕೆರೆಯ ನೀರಿನಲ್ಲಿ ಆಟವಾಡಿ ಮೈಮರೆತ್ತಿದ್ದಾನೆ. ಈ ದೃಶ್ಯ ಕಂಡ ಪ್ರವಾಸಿಗರು ಪುಳಕಿತರಾಗಿದ್ದಾರೆ.
ಸಫಾರಿಗರ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
ಎರಡೆರಡು ಹುಲಿ ಕಂಡು ಸಫಾರಿಗರು ದಿಲ್ ಖುಷ್ ಆಗಿದ್ದಾರೆ.





