Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ನಕ್ಷತ್ರ ಆಮೆ ಅಕ್ರಮ ಮಾರಾಟ ಯತ್ನ: ಆರೋಪಿಗಳ ಬಂಧನ

ಹನೂರು : ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಳ್ಳೇಗಾಲ ಸಿ.ಐ.ಡಿ. ಪೊಲೀಸ್‌ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ.

ಹನೂರು ತಾಲೂಕಿನ ಗುಂಡಿಮಾಳ ಗ್ರಾಮದ ಪ್ರಕಾಶ್( 38)ಮಳ್ಳವಳ್ಳಿ ತಾಲೂಕಿನ ಮಾಗನೂರು ಗ್ರಾಮದ ನಾಗೇಂದ್ರಸ್ವಾಮಿ(45) ಮಳವಳ್ಳಿ ತಾಲೂಕಿನ ರಾಗಿಬೋಮ್ಮನಹಳ್ಳಿ ನಾಗರಾಜು(54) ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.

ಹನೂರು ತಾಲೂಕಿನ ಗುಂಡಿಮಾಳ ಗ್ರಾಮದಿಂದ ಒಡೆಯರ ಪಾಳ್ಯ ಲೊಕ್ಕನಹಳ್ಳಿ ಮಾರ್ಗವಾಗಿ ಹನೂರು ಕಡೆಗೆ ನಕ್ಷತ್ರ ಆಮೆ ರವಾನೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಹನೂರಿನ ಹುಲುಸುಗುಡ್ಡೆ ಸಮೀಪ ಎಸ್ ಐ ವಿಜಯರಾಜ್ ನೇತ್ರತ್ವದ ತಂಡ ದಾಳಿ ನಡೆಸಿ 1ಕೆಜಿ 280 ಗ್ರಾಮ ತೂಕದ ಎರಡು ಜೀವಂತ ನಕ್ಷತ್ರ ಆಮೆ, ಸಾಗಾಟ ಮಾಡಲು ಬಳಸಿದ್ದ ಕೆಎ 51ಎ 3369 ಬಿಳಿ ಟಾಟಾ ಇಂಡಿಕಾ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ದಾಳಿಯಲ್ಲಿ ಎಸ್ ಐ ವಿಜಯರಾಜ್, ಮುಖ್ಯಪೇದೆಗಳಾದ ಸ್ವಾಮಿ ಶಂಕರ್, ಬಸವರಾಜ್‌ ಪೇದೆ ರಾಮಚಂದ್ರಸ್ವಾಮಿ, ಬಸವರಾಜು ಚಾಲಕ ಪ್ರಭಾಕರ್ ಹಾಜರಿದ್ದರು.

Tags: