Mysore
29
scattered clouds

Social Media

ಭಾನುವಾರ, 09 ಫೆಬ್ರವರಿ 2025
Light
Dark

ಕಾಡುಹಂದಿ ಬೇಟೆಗೆ ಯತ್ನ: ಮೂವರ ಬಂಧನ

ಚಾಮರಾಜನಗರ: ತಾಲೂಕಿನ ಮೇಲಾಜಿಪುರ ಸಮೀಪ ಕಾಡುಹಂದಿ ಬೇಟೆಗೆ ಯತ್ನಿಸಿದ ಮೂವರನ್ನು ಪೊಲೀಸರು ಗುರುವಾರ ಬಂಧಿಸಿರುವ ಘಟನೆ ನಡೆದಿದೆ.

ಬಂಧಿತರು ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದ ಕುಮಾರ್‌, ಹಾಸನದ ಚಂದನ್‌ ಹಾಗೂ ಚೆನ್ನಪಟ್ಟಣದ ವಿವೇಕ್‌ ಎಂದು ತಿಳಿದುಬಂದಿದೆ.

ಕಾಡುಹಂದಿ ಬೇಟೆಯಾಡಲು ಕಾರಿನಲ್ಲಿ ಹೊಂಚುಹಾಕಿ ಕುಳಿತಿದ್ದ ಮೂವರನ್ನು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತರಿಂದ ಎರಡು ನಾಡ ಬಂದೂಕು, ಆರು ಸಜೀವ ಕಾಟ್ರೇಜ್‌ಗಳು, ಕಬಬ್ಬಿಣದ ಬಾಲ್ಸ್‌, ಕಾರು ಮತ್ತು ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: