ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಅಭಯಾರಣ್ಯದ ಗುಂಡ್ಲುಪೇಟೆ ಬಫರ್ ಜೋನ್ ವ್ಯಾಪ್ತಿಯ ಪಾರ್ವತಿ ಬೆಟ್ಟದ ಕಂದೇಗಾಲದ ಒಂಟಿಗುಡ್ಡದಲ್ಲಿ ಸುಮಾರು ಎರಡು ವರ್ಷದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ತಾಲೂಕಿನ ಕಂದೇಗಾಲ ಗ್ರಾಮದ ಪ್ರಕಾಶ್ ಎಂಬ ರೈತನ ಜಮೀನಿನಲ್ಲಿ ಅರಣ್ಯ ಇಲಾಖೆ ಬೋನು ಇರಿಸಿತ್ತು. ಇಂದು ಬೆಳಗಿನ ಜಾವ ಎರಡು ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ. ಬೆಳಗಿನ ಜಾವ ರೈತರು ಹೊಲದ ಕಡೆಗೆ ತೆರಳುವಾಗ ಗಮನಿಸಿ ವಿಷಯವನ್ನು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಡಿಆರ್‌ಎಫ್‌ಒ ಶಿವಕುಮಾರ್ ನೇತೃತ್ವದ ತಂಡ ಪರಿಶೀಲನೆ ನಡೆಸಿ, ನಂತರ ಚಿರತೆಯನ್ನು ಮೂಲೆಹೊಳೆ ಅಭಯಾರಣಯದ ಮಧ್ಯೆ ಬಿಟ್ಟಿದ್ದಾರೆ.