Mysore
25
overcast clouds

Social Media

ಶನಿವಾರ, 25 ಏಪ್ರಿಲ 2026
Light
Dark

ಮೈಸೂರು ಕರಗ ಮಹೋತ್ಸವ: ನಗರದಲ್ಲಿ ಅದ್ಧೂರಿ ಮೆರವಣಿಗೆ

ಮೈಸೂರು: ನಗರದ ಸಾಂಸ್ಕೃತಿಕ ಹಬ್ಬಗಳಲ್ಲಿ ಒಂದಾದ 102 ನೇ ವರ್ಷದ ಮೈಸೂರು ಕರಗ ಮಹೋತ್ಸವದ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಲಾಗಿದೆ.

ರೇಣುಕಾದೇವಿ ಕರಗ ದೇವಸ್ಥಾನದ ಟ್ರಸ್ಟ್‌ ಆಶ್ರಯದಲ್ಲಿ ಏಪ್ರಿಲ್.‌21ರಿಂದಲೇ ಧಾರ್ಮಿಕ ವಿಧಿವಿಧಾನಗಳು ನಡೆದಿದ್ದು, ಇಂದು ರಾತ್ರಿ 8 ಗಂಟೆಗೆ ಕರಗ ಮೆರವಣಿಗೆಗೆ ಚಾಲನೆ ನೀಡಲಾಗಿದೆ.

ಶಕ್ತಿ ಸ್ವರೂಪಿಣಿಯ ಮೂರ್ತಿಗಳು ಮಲ್ಲಿಗೆಯ ಮಂಟಪದಲ್ಲಿ, ಜಗಮಗಿಸುವ ವಿದ್ಯುತ್‌ ದೀಪಾಲಂಕಾರಗಳ ನಡುವೆ ಸಂಚರಿಸುತ್ತಿವೆ. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗಿವೆ.

ದೇವಸ್ಥಾನದಿಂದ ಹೊರಟ ಕರಗವು ಪ್ರಮುಖ ರಸ್ತೆಗಳಲ್ಲಿ ಸಾಗಿ ನಾಳೆ ಬೆಳಿಗ್ಗೆ ಪುನಃ ದೇವಸ್ಥಾನ ತಲುಪಲಿದೆ.

 

Tags:
error: Content is protected !!