ಮೈಸೂರು: ಹಿರಿಯ ಚಿಂತಕ ಹಾಗೂ ಲೇಖಕರಾದ ಪ.ಮಲ್ಲೇಶ್ ಅವರು ಬ್ರಾಹ್ಮಣ ಸಮುದಾಯದ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ವಿಪ್ರ ಪ್ರೊಫೆಶನಲ್ ಫೋರಂ ತೀವ್ರವಾಗಿ ಖಂಡಿಸುತ್ತದೆ ಎಂದು ವಿಪ್ರ ಪ್ರೊಫೆಶನಲ್ ಫೋರಂನ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ವಿಪಿಎಫ್‌ನ ಅಧ್ಯಕ್ಷ ಭಾಷ್ಯಂ ಹಾಗೂ ಕಾರ್ಯದರ್ಶಿ ಸುಧೀಂದ್ರ , ಕೆಲ ದಿನಗಳ ಹಿಂದೆ ಪ.ಮಲ್ಲೇಶ್ ಅವರು ಬ್ರಾಹ್ಮಣ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆ ಸರಿಯಲ್ಲ. ಈ ಹೇಳಿಕೆಯನ್ನು ಖಂಡಿಸಿ ಬ್ರಾಹ್ಮಣ ಸಂಘಗಳ ವತಿಯಿಂದ ನವೆಂಬರ್ 21ರಂದು ಉಗ್ರ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ವಿಪ್ರ ಪ್ರೊಫೆಶನಲ್ ಫೋರಂನ ಸಂಪೂರ್ಣ ಬೆಂಬಲ ಇದೆ. ನಮ್ಮ ಫೋರಂ ಸಹ ಪ್ರತಿಭಟನೆಯಲ್ಲಿ ಭಾಗವಹಿಸಲಿದೆ ಎಂದು ತಿಳಿಸಿದ್ದಾರೆ.





