Mysore
23
overcast clouds

Social Media

ಭಾನುವಾರ, 14 ಜೂನ್ 2026
Light
Dark

ದೇಹದಾನದ ಮೂಲಕ ಆದರ್ಶವಾದ ಸತ್ಯಭಾಮ

ಮಂಡ್ಯ: ಮಾರಕ ಕಾಯಿಲೆ ಕ್ಯಾನ್ಸರ್‌ನಿಂದ ನರಳುತ್ತಿದ್ದರೂ ಎಲ್ಲರಿಗೂ ಆದರ್ಶವಾಗಬೇಕೆಂದು ಕ್ಯಾನ್ಸರ್ ಅನ್ನು ಹೇಗೆ ಎದುರಿಸಬೇಕೆಂದು ‘ಗೆದ್ದೇ ಗೆಲ್ಲುವೆನು ಒಂದು ದಿನ’ ಎಂಬ ಪುಸ್ತಕ ಹೊರತಂದಿದ್ದ ಲೇಖಕಿ ಸತ್ಯಭಾಮ ದೇವಿ
(49) ಅವರು ಮೃತಪಟ್ಟಿದ್ದು, ತಮ್ಮ ದೇಹವನ್ನು ಮಿಮ್ಸ್‌ಗೆ ದಾನ ಮಾಡುವ ಮೂಲಕ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಅನುಪಮ ಅವರ ಸಹೋದರಿಯಾದ ಸತ್ಯಭಾಮದೇವಿ ಅವರು ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಎಲ್ಲವನ್ನೂ ಮರೆತು ತಮ್ಮ ಮಗಳು ಹಾಗೂ ಕುಟುಂಬದವರ ಜತೆ ಸಂತಸದಿಂದ ಕಾಲ ಕಳೆಯುತ್ತಿದ್ದರು. ಆದರೆ, ಬೆಂಬಿಡದ ಕ್ಯಾನ್ಸರ್ ಕೊನೆಗೂ ಶನಿವಾರ ಬಲಿತೆಗೆದುಕೊಂಡಿದೆ.
ಆರೋಗ್ಯ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸಿ, ಆರೋಗ್ಯದ ಮಹತ್ವ ಅರಿತಿದ್ದ ಸತ್ಯ ಅವರು ಆರೋಗ್ಯದ ಅಧ್ಯಯನದ ಉದ್ದೇಶದಿಂದ ತಮ್ಮ ದೇಹವನ್ನು ಮಿಮ್ಸ್‌ಗೆ ಹಸ್ತಾಂತರಿಸುವ ನಿರ್ಧಾರ ಮಾಡಿದ್ದರು. ಅಂತೆೆಯೇ ಅವರ ಕುಟುಂಬದವರು ಸತ್ಯ ಅವರ ದೇಹವನ್ನು ಮಿಮ್ಸ್‌ಗೆ ಶನಿವಾರ ಹಸ್ತಾಂತರಿಸಿದರು. ಇವರ ನಿಧನಕ್ಕೆ ಅಪಾರ ಸಅಹಿತ್ಯ ಬಳಗವು ಕಂಬನಿ ಮಿಡಿದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!