ಮಂಡ್ಯ: ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿಗೆ ಅಡ್ಡಿಪಡಿಸಿದ ಪೊಲೀಸರ ವರ್ತನೆ ಖಂಡಿಸಿ ಧರಣಿನಿರತ ರೈತರು ಪೊಲೀಸರ ವರ್ತನೆ ಖಂಡಿಸಿ ವಾಗ್ವಾದ ನಡೆಸಿದ್ದಲ್ಲದೆ, ರಸ್ತೆ ತಡೆ ನಡೆಸಿದ ಘಟನೆ ಗುರುವಾರ ನಡೆಯಿತು.
ಟನ್ ಕಬ್ಬಿಗೆ ೪೫೦೦ ರೂ. ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ನಗರದ ಸರ್ ಎಂ.ವಿ. ಪ್ರತಿಮೆ ಎದುರು ರೈತ ಸಂಘದ ಕಾರ್ಯಕರ್ತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಗುರುವಾರ ಮಧ್ಯಾಹ್ನ ಗೃಹ ಸಚಿವ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಕಾರ್ಯನಿಮಿತ್ತ ಮೈಸೂರಿಗೆ ತೆರಳುತ್ತಿದ್ದರು. ಈ ವಿಷಯ ಅರಿತ ಪ್ರತಿಭಟನಾನಿರತ ರೈತರು ಸಚಿವರ ಕಾರನ್ನು ಅಡ್ಡಗಟ್ಟಿ ವಿಷಯ ತಿಳಿಸಲು ಮುಂದಾದರು.
ಆದರೆ, ಸಿಪಿಐ ಸಂತೋಷ್ ನೇತೃತ್ವದಲ್ಲಿ ಬಂದೋಬಸ್ತ್ನಲ್ಲಿದ್ದ ಪೊಲೀಸರು ಗೃಹ ಸಚಿವರ ಭೇಟಿಗೆ ಅವಕಾಶ ಮಾಡಿಕೊಡದೆ ರೈತ ಮುಖಂಡ ಲಿಂಗಪ್ಪಾಜಿ ಸೇರಿದಂತೆ ಹಲವು ರೈತರನ್ನು ತಳ್ಳಿದ್ದಾರೆ. ಇದರಿಂದ ಕೆರಳಿದ ರೈತರು, ಸಿಪಿಐ ಸಂತೋಷ್ ಸೇರಿದಂತೆ ಪೊಲೀಸರ ನಡುವೆ ವಾಗ್ಯುದ್ಧಕ್ಕೆ ಬಿದ್ದರು.
ಪೊಲೀಸ್ ಅಧಿಕಾರಿ ಕ್ಷಮೆ ಕೇಳಲು ಆಗ್ರಹ: ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ಅವರು ಪ್ರತಿಭಟನಾ ನಿರತ ರೈತರನ್ನು ಬಲವಂತಾಗಿ ಎಳೆದು ಹಾಕಿದ್ದಾರೆ, ಇವರ ನಡೆ ಖಂಡನೀಯ, ಗೃಹಸಚಿವರನ್ನು ಭೇಟಿ ಮಾಡಲು ರಸ್ತೆ ತಡೆಯಲಾಯಿತು. ಆದರೆ ಇದಕ್ಕೂ ಅವಕಾಶ ನೀಡದೇ ಪೊಲೀಸರು ದುಂಡಾವರ್ತನೆ ನಡೆಸಿದ್ದಾರೆ, ರೈತರನ್ನು ಕ್ಷಮೆ ಕೇಳದಿದ್ದರೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವೊಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ:
ಗೃಹಸಚಿವರನ್ನು ಭೇಟಿ ಮಾಡುತ್ತೇವೆ ಎಂದು ಮೊದಲೇ ಪ್ರತಿಭಟನಾಕಾರರು ತಿಳಿಸಿದ್ದರೆ ಅದಕ್ಕೆ ಅವಕಾಶ ಮಾಡಿಕೊಡುತ್ತಿದ್ದೆವು. ನಮಗೆ ಮಾಹಿತಿ ನೀಡದೇ ಏಕಾಏಕಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿ ಗೃಹ ಸಚಿವರ ಕಾರು ತಡೆಯಲು ಮುಂದಾಗಿದ್ದರಿAದ ನಮ್ಮ ಸಿಬ್ಬಂದಿಯು ಅವರ ಕರ್ತವ್ಯ ಮಾಡಿದ್ದಾರೆ. ನಿಮಗೆ ನೋವು ಮಾಡಲು ಅವರ ಉದ್ದೇಶವಿರಲಿಲ್ಲ. ಇಬ್ಬರ ನಡುವೆಯೂ ಮಾಹಿತಿ ಇರದ ಕಾರಣ ಈ ಗೊಂದಲ ಉಂಟಾಗಿದೆ. ಮುಂದೆ ಈ ರೀತಿ ಘಟನೆ ನಡೆಯದ ಹಾಗೆ ನೋಡಿಕೊಳ್ಳುತ್ತೇನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ಪ್ರತಿಭಟನಾನಿರತರನ್ನು ಸಮಾಧಾನಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಎಡಿಸಿ:
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು, ರೈತ ಮುಖಂಡರನ್ನು ಭೇಟಿ ಮಾಡಿ ಅವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಿಮ್ಮ ಬೇಡಿಕೆಗಳ ಮನವಿಯನ್ನು ಕಳುಹಿಸುತ್ತೇನೆ, ಹೀಗೆ ಮಳೆ, ಚಳಿ ಎನ್ನದೇ ಪ್ರತಿಭಟನೆ ಮಾಡುವುದನ್ನು ನಿಲ್ಲಿಸಿ ಎಂದು ಅವರಲ್ಲಿ ಮನವಿ ಮಾಡಿದರು.
ರೈತ ಸಂಘ ಆಕ್ರೋಶ:
ಕಳೆದು ನಾಲ್ಕು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದೇವೆ, ರೈತರ ಚಳವಳಿಗೆ ಬೆಲೆನೇ ಇಲ್ಲದಂತಾಗಿದೆ. ಏಕೆಂದರೆ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಥವಾ ಸಂಸದೆ, ಶಾಸಕರಾಗಲಿ ಸ್ಥಳಕ್ಕೆ ಬರದೇ ಇರುವುದು ಬೇಸರ ತರಿಸಿದೆ. ಮುಂದಿನ ದಿನಗಳಲ್ಲಿ ಪ್ರತಿಭಟನಾ ಚಳವಳಿಯನ್ನು ತೀವ್ರಗೊಳಿಸಲಾಗುವುದು ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಎಚ್ಚರಿಕೆ ನೀಡಿದರು.
ನಾಲ್ಕನೇ ದಿನ ಪೂರೈಸಿದ ಅನಿರ್ದಿಷ್ಟಾವಧಿ ಧರಣಿಗೆ ಮದ್ದೂರು ತಾಲ್ಲೂಕು ರೈತ ಸಂಘದ ಮುಖಂಡರು ಬೆಂಬಲ ನೀಡಿದರು. ಧರಣಿಯಲ್ಲಿ ಮದ್ದೂರು ತಾಲ್ಲೂಕು ಮುಖಂಡರಾದ ರಾಮಕೃಷ್ಣ, ಅಶೋಕ್, ವರದರಾಜು, ಪುಟ್ಟಸ್ವಾಮಿ, ಪ್ರಸನ್ನ, ರಾಮಣ್ಣ, ಶಂಕರ್, ಪುಟ್ಟಮ್ಮ ಇತರರು ಭಾಗವಹಿಸಿದ್ದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಜಿಂಕೆ ಚರ್ಮ ಮಾರಾಟಕ್ಕೆ ಯತ್ನ: ಆರೋಪಿ ಬಂಧನ