ರಸಘಳಿಗೆ
ಆತ್ಮೀಯತೆಯಿಂದಲೇ ಕುಳಿತಿದ್ದ ಪ್ರಸಾದ್-ಎಚ್‌ಸಿಎಂ
ರಾಜಕೀಯದ ನಡೆ ಬೇರೆಯಾದರೂ ಸೈದ್ಧಾಂತಿಕ ನಿಲುವಿನಲ್ಲಿ ಒಂದಾಗಿರುವ ದಲಿತ ನಾಯಕರಾದ ವಿ.ಶ್ರೀನಿವಾಸಪ್ರಸಾದ್ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಆತ್ಮೀಯತೆಯಿಂದಲೇ ಕುಳಿತು ಪರಸ್ಪರ ಚರ್ಚಿಸಿದರು. ನಂಜನಗೂಡು ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿ.ಶ್ರೀನಿವಾಸಪ್ರಸಾದ್ ಭಾಷಣಮಾಡುತ್ತಿದ್ದಾಗ ಡಾ.ಎಚ್.ಸಿ.ಮಹದೇವಪ್ಪ ಅವರು ಆಗಮಿಸಿದರು. ಈ ವೇಳೆ ತಮ್ಮ ಮಾತನ್ನು ನಿಲ್ಲಿಸಿ ಕೂರುವಂತೆ ನೋಡಿಕೊಂಡರು. ಭಾಷಣ ಮುಗಿಸಿದ ಬಳಿಕ ಮಹದೇವಪ್ಪ ಅವರೊಂದಿಗೆ ಮಾತನಾಡಿ ಕೈ ಕುಲುಕಿದರು. ಪ್ರಸಾದ್ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಲೇ ಆರೋಗ್ಯ ನೋಡಿಕೊಳ್ಳುವಂತೆ ಹೇಳಿದರು. ಹಲವು ವರ್ಷಗಳ ಒಟ್ಟಿಗೆ ಈ ನಾಯಕರಿಬ್ಬರನ್ನೂ ನೋಡಿದ ಮುಖಂಡರು ಕೆಲಕಾಲ ಸಂತೋಷಗೊಂಡರು.
ಕೋಟಿ ಮತ್ತೆ ಮತ್ತೆ ನೆನಪು
ರಾಜಶೇಖರಕೋಟಿ ಅವರು ನಮ್ಮ ನಡುವೆ ಇಲ್ಲದಿದ್ದರೂ ಸದಾ ನೆನಪಾಗುತ್ತಾರೆ. ಪತ್ರಿಕೆಯನ್ನು ಓದಲು ಕೈಯಲ್ಲಿ ಹಿಡಿದಾಗ ಕೋಟಿ ನೆನಪಾಗುತ್ತಾರೆ.ಅವರೊಂದಿಗೆ ಇದ್ದ ಒಡನಾಟ,ಆತ್ಮೀಯತೆ ಮರೆಯಲು ಸಾಧ್ಯವಿಲ್ಲ.ಹಾಗೆಯೇ ಅವರ ಮಕ್ಕಳಾದ ರವಿಕೋಟಿ,ರಶ್ಮಿಕೋಟಿ ಪತ್ರಿಕೆಯನ್ನು ಮುನ್ನೆಡೆಸಿಕೊಂಡು ಹೋಗುವಂತೆ ಸಂಸದ ವಿ.ಶ್ರೀನಿವಾಸಪ್ರಸಾದ್ ಕಿವಿಮಾತು ಹೇಳಿದರು.
ಅಭಿಮಾನಕ್ಕೆ ಶರಣಾಗಿ ಹಾಜರಾದ ನಾಯಕರು
ಚುನಾವಣೆ ಒತ್ತಡ,ಗ್ರಾಮಗಳ ಭೇಟಿ ಸೇರಿ ಹಲವಾರು ಕಾರಣಗಳಿಂದ ವೇದಿಕೆ ಕಾರ್ಯಕ್ರಮದಿಂದ ದೂರ ಉಳಿಯುತ್ತಿರುವ ಗಣ್ಯರು ಆಂದೋಲನ ಪತ್ರಿಕೆಯ ಅಭಿಮಾನಕ್ಕೆ ಶರಣಾಗಿ ಹಾಜರಾದರು. ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್,ಮಹದೇವಯ್ಯ ಅವರು ಮಂಗಳವಾರ ರಾತ್ರಿಯೇ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿ ಬುಧವಾರ ಸಮಯಕ್ಕೆ ಸರಿಯಾಗಿ ಹಾಜರಾದರು. ಕಾರ್ಯಕ್ರಮಕ್ಕೆ ಬಂದೊಡನೆ ರವಿ ಕೋಟಿ ಅವರಿಗೆ ಹೂಗುಚ್ಛ ಕೊಟ್ಟು ಶುಭಾಶಯ ಹೇಳಿದರು.