ಚಾಮರಾಜನಗರ : ನಗರದ ಕೆವಿಕೆ ಸಭಾಂಗಣದಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನ, ಕೊಳ್ಳೇಗಾಲ & ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಇವರ ಸಹಯೋಗದೊಂದಿಗೆ ಜೀವ ಜಗತ್ತು ಪುಸ್ತಕ ಬಿಡುಗಡೆ ಹಾಗೂ ಸಹಜ ಕೃಷಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗಿಡಕ್ಕೆ ನೀರೆರೆದು, ಜೀವ ಜಗತ್ತು ಪುಸ್ತಕವನು ಬಿಡುಗಡೆಗೊಳಿಸುವ ಮೂಲಕ ಕಾರ್ಯಕ್ರಮವನ್ನು ಸಾಹಿತಿ, ಹಿರಿಯ ಪತ್ರಕರ್ತತು ಹಾಗೂ ಕನ್ನಡ ಪ್ರಭ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಅಂಶಿ ಪ್ರಸನ್ನಕುಮಾರ್ ಅವರು ಉದ್ಘಾಟಿಸಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ನಂತರದಲ್ಲಿ ಕೆವಿಕೆ ಕೃಷಿ ವಿಜ್ಞಾನಿ ಡ.| ಯೋಗೀಶ್ ಜಿ ಎಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದೇವರಾಜು ಕಪ್ಪಸೋಗೆ, ಜೆ ಎಸ್ ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿಕುಮಾರ್ ಎಸ್ ಮಾತನಾಡಿದರು.
ಬಳಿಕ ಕಾರ್ಯಕ್ರಮದಲ್ಲಿ ಹಾಜರಿದ್ದ ರೈತರಿಗೆ ಸಹಜ ಕೃಷಿ ಬಗ್ಗೆ ಸಹಜ ಕೃಷಿ ವಿಜ್ಞಾನಿ ಡಾ.ಮಂಜುನಾಥ ರವರು ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲೆ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಯ ರೈತರುಗಳು, ರೈತ ಮುಖಂಡರು, ಸ್ವದೇಶಿ ಆಂದೋಲನ ಚಳುವಳಿ ಸಂಚಾಲಕರಾದ ಮಾಧವನ್, ರೈತ ಸಾಹಿತಿ ಪ್ರಶಾಂತ ಜಯರಾಂ, ಚಿಂತಕರಾದ ಕೋಟಂಬಳ್ಳಿ ಗುರುಸ್ವಾಮಿ, ಯುವ ರೈತರಾದ ಶಿವಕುಮಾರ, ಮುಡಿಗುಂಡ ಪ್ರಸಾದ್, ಮಧುಕರ, ತೇರಂಬಳ್ಳಿ ಕುಮಾರ, ಕೃಷಿ ವಿಜ್ಞಾನಿಗಳಾದ ಶೃತಿ, ರಜತ್, ಆದರ್ಶ ಮತ್ತು ಕೆವಿಕೆ ಸಿಬ್ಬಂದಿಗಳು, ಮತ್ತಿತರರು ಹಾಜರಿದ್ದರು.





