ಹುಬ್ಬಳ್ಳಿ: “ರಾಹುಲ್ ಗಾಂಧಿ ವಿರುದ್ದ ನಾವ್ಯಾಕೆ ಖರ್ಚು ಮಾಡಬೇಕು? ಇದು ಜನರಿಗೂ ಗೊತ್ತಾಗಿದೆ. ಅವರ ಪಕ್ಷದವರಿಗೂ ಗೊತ್ತಿದೆ. ಕಾಂಗ್ರೆಸ್ ಸ್ಪರ್ಧೆ ಮಾಡಿದ ಯಾವ ಚುನಾವಣೆಯಲ್ಲೂ ಗೆಲುತ್ತಿಲ್ಲ. ಸ್ಪರ್ಧೆ ಮಾಡುವ ಎಲ್ಲ ಚುನಾವಣೆಯಲ್ಲಿ ಸೋಲುತ್ತಿದ್ದಾರೆ. ಅವರನ್ನು ನಿಷ್ಪ್ರಯೋಜಕ , ಅಪ್ರಯೋಜಕ, ಬುದ್ಧಿ ಇಲ್ಲ ಎಂದು ನಾವು ಹೇಳುವುದಿಲ್ಲ ’’
-ಇದು ನನ್ನ ವಿರುದ್ದ ಅಪಪ್ರಚಾರಕ್ಕೆ ಕೋಟಿ ಕೋಟಿ ಖರ್ಚು ಮಾಡ್ತಾರೆ ಎಂಬ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆಗೆ ಕೇಂದ್ರ ಗಣಿ ಕಲ್ಲಿದ್ಸಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಪ್ರತಿಕ್ರಿಯೆ.
ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕುರೋಕೆ ಅರ್ಹತೆ ಇಲ್ಲ. ಒಂದು ಕಾಲದಲ್ಲಿ 28 ರಾಜ್ಯಗಳಲ್ಲಿ 26 , 27 ರಾಜ್ಯಗಳಲ್ಲಿ ಅವರದೇ ಅಧಿಕಾರ ಇತ್ತು. ಇವತ್ತು ಕೇವಲ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅದರಲ್ಲ್ಲೂ ರಾಜಸ್ಥಾನ ಇದೀಗ ಅಲುಗಾಡುತ್ತಿದೆ ಎಂದು ಹೇಳಿದರು.