Mysore
29
overcast clouds

Social Media

ಮಂಗಳವಾರ, 22 ಸೆಪ್ಟೆಂಬರ್ 2026
Light
Dark

6ಕೆಜಿ ತೂಕದ ಗೆಡ್ಡೆ ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿ

ಮೈಸೂರು: ಕಾವೇರಿ ಹಾರ್ಟ್‌ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು 39 ವರ್ಷ ವಯಸ್ಸಿನ ಮಹಿಳೆಯ ಉದರದಿಂದ 6ಕೆ.ಜಿ ತೂಕದ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿದ್ದಾರೆ.

ಮಹಿಳೆಯು ಬಹಳ ಸಮಯದಿಂದ ಹೂಟ್ಟೆ ನೋವಿನಿಂದ ಬಳಲುತ್ತಿದ್ದು, ಅದಕ್ಕಾಗಿ ವಿವಿಧ ಆಸ್ಪತ್ರೆ ಬಳಿಗೆ ಹೋಗಿದ್ದರು ಆದರೂ ಹೊಟ್ಟೆ ನೋವು ಗುಣವಾಗಿರಲಿಲ್ಲ. ಕೊನೆಗೆ ಕನ್ಸಲ್ಟೆಂಟ್ ಆಂಕೊಸರ್ಜನ್ ಡಾ. ಗಿರೀಶ್ ಅವರೊಂದಿಗೆ ಸಮಾಲೋಚಿಸಿದ ನಂತರ, ಅವರು ಅಗತ್ಯ ಸ್ಕ್ಯಾನ್ನಿಂಗ್ , ಮತ್ತಿತರ ಪರೀಕ್ಷೆಗಳ ನಂತರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು.

ನಾಲ್ಕು ಗಂಟೆಗೂ ಅಧಿಕ ಸಮಯ ತೆಗೆದುಕೊಂಡ ಈ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಮಹಿಳೆಯ ಅಂಡಾಶಯದಿಂದ 6 ಕೆಜಿಯಷ್ಟು ಗೆಡ್ಡೆಯನ್ನು ಹೊರತೆಗೆಯಲಾಯಿತು. ಆ ಗಡ್ಡೆಯನ್ನು ಪರೀಕ್ಷೆಗೆ ಹೊಳಪಡಿಸಿ ಕ್ಯಾನ್ಸರ್ ಗೆಡ್ಡೆ ಎಂದು ಸಾಬೀತಾಯಿತು. ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯು ಬಲುಬೇಗ ಗುಣಮುಖರಾಗಿ, ಕ್ಯಾನ್ಸರ್ ಸಂಪೂರ್ಣ ಚಿಕಿತ್ಸೆಗಾಗಿ ಕೀಮೋಥೆರಪಿಯನ್ನು ನಡೆಸಲಾಗುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!