Mysore
20
broken clouds

Social Media

ಗುರುವಾರ, 13 ನವೆಂಬರ್ 2025
Light
Dark

ಮೈಸೂರು | ಶ್ರೀಮಂತರ ಸೋಗಿನಲ್ಲಿ ಪೀಠೋಪಕರಣ ಖರೀದಿಗೆ ಬಂದ ಕುಟುಂಬ : ಮಳಿಗೆ ಮಾಲೀಕನಿಗೆ 99.65 ಲಕ್ಷ ರೂ. ವಂಚನೆ

ಮೈಸೂರು : ಶ್ರೀಮಂತರ ಸೋಗಿನಲ್ಲಿ ಫರ್ನಿಚರ್ ಅಂಗಡಿಯೊಂದಕ್ಕೆ ಬಂದ ಕೇರಳಾ ಮೂಲದ ಕುಟುಂವೊಂದು ಮಾಲೀಕನಿಗೆ ೯೯.೬೫ ಲಕ್ಷ ವಂಚಿಸಿದ ಪ್ರಕರಣ ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹೂಟಗಳ್ಳಿಯಲ್ಲಿರುವ ಟ್ರೀ ಟ್ರೆಂಡ್ಸ್ ಅಂಗಡಿ ಮಾಲೀಕ ಎ.ಸಿ.ರಾಯ್ ವಂಚನೆಗೆ ಒಳಗಾದವರು. ಕೇರಳಾ ರಾಜ್ಯ ಕ್ಯಾಲಿಕಟ್‌ನ ಹಕ್ಕಿನ್, ಹಫ್ತಾತ್ ಬೀವಿ, ಮೊಹಮದ್ ಖಾಲೀಸ್, ಮೊಹಮದ್ ವಾಸೀಲ್, ಫರ್ವೀಜ್ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.

ಶ್ರೀಮಂತರ ಸೋಗಿನಲ್ಲಿ ಐಶಾರಾಮಿ ಕಾರಿನಲ್ಲಿ ಫರ್ನಿಚರ್ ಅಂಗಡಿಗೆ ಬಂದ ಹಕ್ಕಿನ್ ಹಾಗೂ ಕುಟುಂಬ ತಾನು ಕೇರಳಾದಲ್ಲಿ ಎರಡು ಮನೆ ಖರೀದಿಸಿದ್ದು ಫರ್ನಿಚರ್‌ಗಳು ಬೇಕೆಂದು ನಂಬಿಸಿದೆ. ವಾಟ್ಸಪ್ ವೀಡಿಯೋ ಕಾಲ್‌ನಲ್ಲಿ ತನ್ನ ಮನೆಯನ್ನ ತೋರಿಸಿ ಇಂಜಿನಿಯರ್ ಜೊತೆ ಮಾತನಾಡಿಸಿದ್ದಾರೆ.

ಹೆಚ್ಚು ಬೆಲೆ ಬಾಳುವ ಪೀಠೋಪಕರಣಗಳನ್ನ ಖರೀದಿಸಿದೆ. ೪೦ ಲಕ್ಷ ರೂ. ಮೌಲ್ಯದ ಫರ್ನಿಚರ್ ಖರೀದಿಸಿ ಪ್ಯಾಕ್ ಮಾಡುವಂತೆ ತಿಳಿಸಿ ಖಾಲಿ ಚೆಕ್‌ಗಳನ್ನ ನೀಡಿದ್ದಾರೆ. ತಾನು ಹೇಳಿದ ದಿನ ಚೆಕ್‌ನ್ನು ಬ್ಯಾಂಕ್ ಗೆ ಹಾಕುವಂತೆ ತಿಳಿಸಿ, ಹಣ ಬಂದ ನಂತರ ಫರ್ನಿಚರ್‌ಗಳನ್ನು ಕಳುಹಿಸುವಂತೆ ಸೂಚನೆ ನೀಡಿ ತೆರಳಿದ್ದಾರೆ.

ಇದನ್ನೂ ಓದಿ:-ಸಮಾಜದಲ್ಲಿ ಪುರುಷ-ಮಹಿಳೆಯರು ಸಮಾನರು : ಶಾಸಕ ಜಿಟಿಡಿ

ಒಂದೆರಡು ದಿನಗಳ ನಂತರ ಖಾಲಿ ಚೆಕ್‌ನಲ್ಲಿ ೪೦ ಲಕ್ಷ ರೂ. ತುಂಬಿ ಹಕ್ಕಿನ್‌ನ ಅನುಮತಿಯಂತೆ ಬ್ಯಾಂಕ್‌ಗೆ ನಗದೀಕರಿಸಲು ಹಾಕಿದ್ದಾರೆ. ಆದರೆ, ಚೆಕ್ ಹಣವಿಲ್ಲದೆ ಬೌನ್ಸ್ ಆಗಿದೆ. ಈ ವಿಚಾರ ಹಕ್ಕಿನ್‌ಗೆ ತಿಳಿಸಿದಾಗ ತಾನೇ ಬರುವುದಾಗಿ ತಿಳಿಸಿದ್ದಾನೆ.

ಕೆಲವು ದಿನಗಳ ನಂತರ ಅಂಗಡಿಗೆ ಬಂದ ಹಕ್ಕಿನ್ ತನ್ನ ಖಾತೆಯಲ್ಲಿ ೧೨೪ ಕೋಟಿ ರೂ. ಹಣವಿದೆ. ಐಟಿ ಅಧಿಕಾರಿಗಳು ಖಾತೆಯನ್ನು ಫ್ರೀಜ್ ಮಾಡಿದ್ದಾರೆ. ಇದರಿಂದ ಚೆಕ್ ಬೌನ್ಸ್ ಆಗಿದೆ ಎಂದು ಹೇಳಿ ಹಲವಾರು ದಾಖಲೆಗಳನ್ನ ತೋರಿಸಿ ನಂಬಿಸಿದ್ದಾನೆ.

ಅಕೌಂಟ್ ಅನ್‌ಫ್ರೀಜ್ ಆದರೆ ನಿನ್ನ ಬಳಿಯೇ ಫರ್ನಿಚರ್‌ಗಳನ್ನ ಖರೀದಿ ಮಾಡುತ್ತೇನೆ. ಅಲ್ಲದೆ ತನಗೆ ಬರುವ ಹಣದಲ್ಲಿ ಶೇ.೨೫ ಕಮೀಷನ್ ಸಹ ಕೊಡುವುದಾಗಿ ಆಮಿಷವೊಡ್ಡಿದ ಹಕ್ಕಿನ್ ರಾಯ್ ಅವರನ್ನು ನಂಬಿಸಿ ಅಕೌಂಟ್ ಅನ್ ಫ್ರೀಜ್ ಮಾಡಲು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ.

ಹಕ್ಕಿನ್ ತೋರಿಸಿದ ದಾಖಲೆಗಳನ್ನು ನಂಬಿದ ರಾಯ್ ಹಂತ ಹಂತವಾಗಿ ೯೯,೬೫,೫೦೦ ರೂ. ಹಣ ಕೊಟ್ಟಿದ್ದಾರೆ. ಲಕ್ಷಾಂತರ ಹಣ ಬಂದ ನಂತರ ಹಕ್ಕಿನ್ ಈ ಸಮಸ್ಯೆಗೆ ಇಲ್ಲಿ ಪರಿಹಾರ ಸಿಗುವುದಿಲ್ಲ ದೆಹಲಿಯಿಂದಲೇ ಬಗೆಹರಿಸಬೇಕೆಂದು ಮತ್ತಷ್ಟು ಹಣದ ಸಹಾಯ ಕೇಳಿದ್ದಾನೆ.

ಈ ಸಂಧರ್ಭದಲ್ಲಿ ರಾಯ್ ಅವರಿಗೆ ತಾವು ಮೋಸ ಹೋಗಿರುವುದು ಖಚಿತವಾಗಿದೆ. ಸಧ್ಯ ಹಕ್ಕಿನ್ ಸೇರಿದಂತೆ ಕುಟುಂಬದ ೫ ವಿರುದ್ದ ರಾಯ್ ಪ್ರಕರಣ ದಾಖಲಿಸಿದ್ದಾರೆ.

Tags:
error: Content is protected !!