ಇತ್ತೀಚೆಗೆ ಹೃದಯಾಘಾತದ ಸನ್ನಿವೇಶಗಳು ಬಹಳ ಆಘಾತಕಾರಿಯಾಗಿವೆ. ಸ್ಟೇಜ್ ಮೇಲೆ ಮಾತನಾಡುವಾಗ, ಕಬಡ್ಡಿ ಆಡುವಾಗ, ಯೋಗಾಭ್ಯಾಸ ಮಾಡುವಾಗ ಹೀಗೆ ಊಹಿಸಲಾಗದ ರೀತಿಯಲ್ಲಿ ಹೃದಯಾಘಾತ ಸಂಭವಿಸಿ ಆತಂಕ ಮೂಡಿಸುತ್ತಿದೆ.
ಎಲ್ಲ ವಯಸ್ಸಿನವರೂ ಈಗ ಹೃದ್ರೋಗದಿಂದ ತಮ್ಮನ್ನು ಪಾರು ಮಾಡಿಕೊಳ್ಳುವ ಚಿಂತೆ ಕಾಡುತ್ತಿದೆ. ಕೆಲ ದಿನಗಳ ಹಿಂದೆ ದೈಹಿಕವಾಗಿ ಸದೃಢವಾಗಿದ್ದ ಕಬಡ್ಡಿ ಆಟಗಾರ ಮಂಡ್ಯ ಜಿಲ್ಲೆಯ ಕ್ರೀಡಾಂಗಣದಲ್ಲಿ ಆಟವಾಡುತ್ತಿರುವಾಗಲೇ ಹೃದಯಸ್ತಂಭನವಾಗಿ ನಿಧನರಾದ ಸುದ್ದಿ ಬೆಚ್ಚಿ ಬೀಳಿಸಿತ್ತು. ಇನ್ನೂ ಕೆಲ ದಿನಗಳ ಹಿಂದೆ ವಿಶ್ವದ ಶ್ರೇಷ್ಠ ಯೋಗ ಗುರುಗಳಲ್ಲಿ ಒಬ್ಬರಾದ ಶರತ್ ಜೋಯಿಸ್ ಅವರು ಯೋಗ ತರಬೇತಿ ಮುಗಿಸಿ ಬರುವ ವೇಳೆ ಹೃದಯಾಘಾತ ವಾಗಿ ಮೃತರಾದರು.
ಇದೆ ಮಾದರಿಯಲ್ಲಿ ಇನ್ನೂ ಅನೇಕ ಹೃದಯಾ ಘಾತ ಪ್ರಕರಣಗಳು ದಾಖಲಾಗಿವೆ. ಎಷ್ಟೋ ಮಂದಿ ಆಸ್ಪತ್ರೆಗೆ ಕರೆ ತರುವ ಮುನ್ನವೇ ಅಸುನೀಗಿದ್ದಾರೆ. ಗ್ರಾಮೀಣ ಪ್ರದೇಶದ ಜನತೆಯೂ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಈಗ ಚಳಿಗಾಲ ಇರುವುದರಿಂದ ಹೃದಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ.
ಚಳಿಗಾಲದಲ್ಲಿ ಹೃದಯಾಘಾತ, ಪಾರ್ಶ್ವ ವಾಯು ಸೇರಿದಂತೆ ಹೃದ್ರೋಗದ ಸಮಸ್ಯೆಗಳು ಹೆಚ್ಚಾಗುತ್ತವೆ. ಹೃದಯಕ್ಕೆ ರಕ್ತ ಪಂಪ್ ಆಗುವುದು ಕಡಿಮೆಯಾದರೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಈ ಸಮಯದಲ್ಲಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಜ್ವರ, ಕೆಮ್ಮು, ನೆಗಡಿಯ ಜೊತೆಗೆ ಗಂಭೀರ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.
ಇದರಿಂದ ಹೃದಯಾಘಾತದ ಪ್ರಮಾಣವೂ ಹೆಚ್ಚು. ತಾಪಮಾನ ಕಡಿಮೆಯಾದಾಗ ರಕ್ತನಾಳ ಗಳು ಸಂಕುಚಿತಗೊಳ್ಳುವುದರಿಂದ, ಇದು ಪಾರ್ಶ್ವ ವಾಯು ಮತ್ತು ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚಿಸಲಿದೆ. ಚಳಿಗಾಲದಲ್ಲಿ ಪರಿಧಮನಿಯ ಸಂಕೋಚನದಿಂದಾಗಿ ಎದೆ ನೋವು ಉಲ್ಬಣ ಗೊಳ್ಳ ಲಿದೆ. ರಕ್ತದೊತ್ತಡದ ಹೆಚ್ಚಳದ ಪರಿಣಾಮವಾಗಿ ಚಳಿಗಾಲದಲ್ಲಿ ಅದೇ ಪ್ರಮಾ ಣದ ರಕ್ತ ವನ್ನು ಪಂಪ್ ಮಾಡಲು ಹೃದಯವು ಹೆಚ್ಚು ಶ್ರಮಿಸಬೇಕಾಗು ತ್ತದೆ. ‘ಶೀತ ವಾತಾವರಣವು ದೇಹ ದೊಳಗೆ ಮಾರಣಾಂತಿಕ ರಕ್ತ ಹೆಪ್ಪು ಗಟ್ಟು ವಿಕೆಯ ಸಾಧ್ಯತೆಯನ್ನು ಹೆಚ್ಚಿ ಸಲಿದೆ, ಪ್ಲೇಟ್‌ಲೆಟ್‌ಗಳು ಸಾಮಾನ್ಯವಾಗಿ ಒಟ್ಟಿಗೆ ಸೇರಿಕೊಂಡು ಹೆಪ್ಪುಗಟ್ಟು ವಿಕೆಗೆ ಕಾರಣವಾಗಲಿದೆ. ಅದು ರಕ್ತಸ್ರಾವವನ್ನು ನಿಲ್ಲಿಸಲು ಸಹಾಯ ಮಾಡಲಿದೆ. ಅಧ್ಯಯನಗಳ ಪ್ರಕಾರ, ಚಳಗಾಲ ದಲ್ಲಿ ಬೆಳಗಿನ ಸಮಯದಲ್ಲಿ ಹೃದಯಾಘಾತ ಮತ್ತು ಹೃದ್ರೋಗಕ್ಕೆ ಸಂಬಂಽಸಿದ ಸಮಸ್ಯೆಗಳು ಹೆಚ್ಚಾಗಿ ಕಂಡು ಬರು ತ್ತಿವೆ. ಇತ್ತೀಚಿನ ಅಧ್ಯಯನ ಗಳಿಂದ ಹೃದಯಾಘಾತವು ಸಾಮಾನ್ಯವಾಗಿ ಬೆಳಗಿನ ರಕ್ತದೊತ್ತಡದ ಹೆಚ್ಚಳ ದಿಂದ ಉಂಟಾಗುತ್ತದೆ ಎಂದು ತಿಳಿದು ಬಂದಿದೆ. ಇದರೊಂದಿಗೆ ಕೆಲವು ಹಾರ್ಮೋನ್‌ಗಳ ಅಸಮ ತೋಲನವು ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು.
ಯಾವ ಕಾರಣಗಳಿಗೆ ಹೃದಯಾಘಾತವಾಗುತ್ತದೆ?
ರಕ್ತದೊತ್ತಡ: ಶೀತಗಾಳಿ ಅಥವಾ ಶೀತದ ವಾತಾವರಣವು ಹೃದಯದ ಮೇಲೆ ಹೆಚ್ಚು ಒತ್ತಡವನ್ನು ಉಂಟು ಮಾಡಲಿದ್ದು, ಇದರಿಂದ ಹೃದಯದ ಕವಾಟಗಳಲ್ಲಿ ರಕ್ತ ಸಂಚಲನ ಕ್ಲಿಷ್ಟವಾಗಲಿದೆ.
ಉಸಿರಾಟದ ಸಮಸ್ಯೆ: ಚಳಗಾಲದಲ್ಲಿ ವ್ಹೀಸಿಂಗ್, ಅಸ್ತಮಾ ಇರುವವರಿಗೆ ಹಾಗೂ ಪ್ರದೂಷಣೆಗೆ ಒಳಗಾಗುವವರಲ್ಲಿ ಉಸಿರಾಟದ ಸಮಸ್ಯೆ ಕಾಡಲಿದೆ. ವಾಯುಮಾಲಿನ್ಯ ಉಸಿರಾಟದ ಮೇಲೆ ಪರಿಣಾಮ ಬೀರಲಿದ್ದು, ಇದು ಕೂಡ ಹೃದಯದ ಮೇಲೆ ಹೆಚ್ಚು ಒತ್ತಡ ಬೀಳಲು ಕಾರಣವಾಗಲಿದೆ.
ವ್ಯಾಯಾಮದ ಕೊರತೆ: ಚಳಿಗಾಲದಲ್ಲಿ ಹೆಚ್ಚಾಗಿ ಜನ ದೈಹಿಕ ಚಟುವಟಿಕೆಯಿಂದ ದೂರ ಉಳಿಯುತ್ತಾರೆ ತಣ್ಣನೆಯ ಗಾಳಿ ಜನರನ್ನು ಸೋಮಾರಿಯನ್ನಾಗಿಸುತ್ತದೆ. ಹೀಗೆ ದೈಹಿಕ ಚಟುವಟಿಕೆ ಕಡಿಮೆಯಾಗುವುದರಿಂದ ಹೃದಯದ ರಕ್ತನಾಳಗಳು ರಕ್ತ ಸಂಚಾರ ಕಡಿಮೆಯಾಗಿ ಹೃದಯಕ್ಕೆ ತೊಂದರೆಯನ್ನುಂಟು ಮಾಡಬಹುದು.
ಜಂಕ್-ಫುಡ್ ಸೇವನೆ: ಚಳಿಗಾಲದಲ್ಲಿ ಬೆಚ್ಚಿಗಿನ ಆಹಾರ ತಿನ್ನುವ ಬಯಕೆ ಹೆಚ್ಚಾಗುತ್ತದೆ. ಅದರಲ್ಲೂ ಬಜ್ಜಿ, ಬೋಂಡ ರಸ್ತೆ ಬದಿಯಲ್ಲಿರುವ ಇತರೆ ಜಂಕ್-ಡ್ ತಿನ್ನಲು ಮುಂದಾಗುತ್ತಾರೆ. ಇದರಿಂದಲೂ ಹೃದಯದ ಆರೋಗ್ಯ ಹಾಳಾಗಲಿದ್ದು, ಹೃದಯಾಘಾತಕ್ಕೂ ಕಾರಣವಾಗಬಹುದು.
ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು
ಹೃದ್ರೋಗದ ಸಮಸ್ಯೆ ಇರುವವರು ಚಳಿಗಾಲದಲ್ಲಿ ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವುದು ಅವಶ್ಯ. ಹಣ್ಣು ಮತ್ತು ತರಕಾರಿಗಳ ಸೇವನೆಯನ್ನು ಹೆಚ್ಚಿಸಬೇಕು. ಕನಿಷ್ಠ ೩೦-೪೦ ನಿಮಿಷಗಳ ಕಾಲ ದೈಹಿಕ ಚಟುವಟಿಕೆ ಮಾಡಬೇಕು. ಪ್ರತಿದಿನ ಬ್ರಿಸ್ಕ್ ವಾಕ್ ಮಾಡುವುದು, ಸೈಕ್ಲಿಂಗ್, ಈಜು ಮತ್ತು ಜಾಗಿಂಗ್ ನಂತಹ ಇತರ ಚಟುವಟಿಕೆಗಳು ಕೂಡ ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತವೆ. ಇವುಗಳನ್ನು ಐಸೋಟೋನಿಕ್ ವ್ಯಾಯಾಮ ಗಳು ಎಂದು ಕರೆಯಲಾಗುತ್ತದೆ. ಇದು ಹೃದಯದ ಆರೋಗ್ಯಕ್ಕೆ ಮುಖ್ಯವಾಗಿದೆ. ಆದರೆ, ತೂಕ ಎತ್ತುವಂತಹ ಐಸೋ ಮೆಟ್ರಿಕ್ ವ್ಯಾಯಾಮಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದ ರೊಂದಿಗೆ ಚಳಿಗಾಲದಲ್ಲಿ ಮದ್ಯಪಾನ, ಧೂಮಪಾನ ಸೇವನೆ ಕಡಿಮೆ ಮಾಡಬೇಕು.
ಹೃದಯದ ಆರೈಕೆಗೆ ಈ ಸಲಹೆ ಪಾಲಿಸಿ
ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳಿ, ನಿಯಮಿತ ದೈಹಿಕ ಚಟುವಟಿಕೆ, ರಕ್ತದೊತ್ತಡದ ಮೇಲೆ ಗಮನವಿರಲಿ, ಧೂಮಪಾನ ಹೃದ್ರೋಗಕ್ಕೆ ಅಪಾಯಕಾರಿ. ಹೀಗಾಗಿ ಧೂಮಪಾನ ತ್ಯಜಿಸುವುದು ಉತ್ತಮ.
ಚಳಿಗಾಲದಲ್ಲಿ ನಾಲಿಗೆಯ ಬಯಕೆಗಿಂತ ದೇಹದ ಬಯಕೆಗೆ ಆದ್ಯತೆ ನೀಡಿ, ಪಾನಿಪುರಿ, ಬೋಂಡ, ಬಜ್ಜಿ ಇತರೆ ಜಂಕ್ -ಡ್ ಸೇವನೆಗಿಂತ ಹಣ್ಣುಗಳು, ತರಕಾರಿ ಮತ್ತು ಧಾನ್ಯಗಳು ಸಮೃದ್ಧವಾಗಿರುವ ಸಮತೋಲಿತ ಆಹಾರ ಸೇವಿಸಿ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಿ.
ನಿದ್ರೆ ಮಾಡಿರಿ: ಹೃದಯ ರಕ್ತನಾಳದ ಯೋಗಕ್ಷೇಮ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಸಾಕಷ್ಟು ನಿದ್ರೆ ಅತ್ಯಗತ್ಯ
ಈಗಾಗಲೇ ಹೃದಯದ ಸಮಸ್ಯೆ ಇರುವವರು ಹಾಗೂ ಹೃದಯಾಘಾತದ ಕುಟುಂಬದ ಇತಿಹಾಸ ಹೊಂದಿರುವವರು ಆಗಾಗ್ಗೇ ವೈದ್ಯರನ್ನು ಕಾಣವುದು ಉತ್ತಮ. ಸಣ್ಣದಾಗಿ ಎದೆನೋವು ಕಾಣಿಸಿಕೊಂಡರೆ, ಹೃದಯಾಘಾತದ ಲಕ್ಷಣಗಳು ನಿಮ್ಮಲ್ಲಿ ಕಂಡರೆ ತಡಮಾಡದೇ ವೈದ್ಯರನ್ನು ಕಾಣುವುದು ಉತ್ತಮ. ಅದರಲ್ಲೂ ಚಳಿಗಾಲ ಮುಗಿಯುವವರೆಗೂ ಹೃದಯದ ಮೇಲೆ ಒಂದು ಗಮನವಿರಲಿ.