Mysore
28
broken clouds

Social Media

ಬುಧವಾರ, 28 ಜನವರಿ 2026
Light
Dark

ಉಪದ್ರವಕಾರಿ ಶ್ವಾನಗಳ ನಿಯಂತ್ರಣಕ್ಕೆ ಪರಿಹಾರ ಕ್ರಮ ಅಗತ್ಯ 

ವಸಂತಕುಮಾರ ಮೈಸೂರಮಠ, ಸಾಮಾಜಿಕ ಕಾರ್ಯಕರ್ತರು

ಶ್ವಾನ ಮನುಷ್ಯನ ಅತ್ಯತ್ತಮ ಸ್ನೇಹಿತ ಎಂಬುದರಲ್ಲಿ ಸಂದೇಹವಿಲ್ಲ! ಆದರೆ ಅವು ಉಪದ್ರವಕಾರಿ ಯಾದಾಗ ಏನಾದರೂ ಒಂದು ಪರಿ ಹಾರ ಕಂಡುಕೊಳ್ಳುವುದು ಅತ್ಯಗತ್ಯ. ನಾನು ೮೩ ವರ್ಷ ವಯಸ್ಸಿನವನು. ನಾಯಿಗಳೊಂದಿಗೇ ಬೆಳೆದವನು. ಕೆಲವೊಮ್ಮೆ ಅವು ಅನಾರೋಗ್ಯದಿಂದ ನನ್ನನ್ನು ಕಚ್ಚಿರುವ ಘಟನೆಗಳೂ ನಡೆದಿವೆ. ಬೀದಿಗಳಲ್ಲಿ ನನ್ನ ನಾಯಿಗಳನ್ನು ರಕ್ಷಿಸಲು ಪ್ರಯತ್ನಿಸುವಾಗ ಕೆಲವೊಮ್ಮೆ ಬೀದಿ ನಾಯಿಗಳಿಂದ ಕಚ್ಚಿಸಿಕೊಂಡು ಹಲವಾರು ಬಾರಿ ರೇಬಿಸ್ ನಿರೋಧಕ ಚುಚ್ಚುಮದ್ದುಗಳನ್ನೂ ಹಾಕಿಸಿಕೊಂಡಿದ್ದೇನೆ. ನಮ್ಮ ಜಮೀನು/ಎಸ್ಟೇಟ್‌ನಲ್ಲಿ ಕಾಡು ನಾಯಿಗಳ ಜೊತೆಗೂ ನಾನು ಅನುಭವವನ್ನು ಹೊಂದಿದ್ದೇನೆ. ನ್ಯಾಯಾಂಗ ತೀರ್ಪುಗಳ ಸಾಧಕ/ಬಾಧಕಗಳ ವಿಚಾರಕ್ಕೆ ಹೋಗದೆ, ಮಾನವೀಯ ದೃಷ್ಟಿಯ ಆಧಾರದ ಮೇಲೆ ಈ ಕೆಳಗಿನ ಸಲಹೆಗಳನ್ನು ನೀಡುತ್ತಿದ್ದೇನೆ

ಎಲ್ಲೆಲ್ಲಿ ಬೀದಿ ನಾಯಿಗಳು ಅಪಾಯವಾಗಿ ಪರಿಣಮಿಸಿವೆಯೋ ಅಲ್ಲೆಲ್ಲ…:

೧ ಬೀದಿನಾಯಿಗಳನ್ನು ಹಿಡಿಯಿರಿ, ಪಶುವೈದ್ಯರಿಂದ ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಅನಾರೋಗ್ಯದಿಂದ ಬಳಲುತ್ತಿರುವ ಶ್ವಾನಗಳನ್ನು ಆರೋಗ್ಯವಂತ ನಾಯಿಗಳಿಂದ ಬೇರ್ಪಡಿಸಿ, ಆರೋಗ್ಯವಂತ ನಾಯಿಗಳ ಕಿವಿಗೆ ಒಂದು ಗುರುತಿನ ಸಂಖ್ಯೆಯೊಂದಿಗೆ ಜಿಪಿಎಸ್ ಟ್ಯಾಗ್ ಅನ್ನು ಅಳವಡಿಸಿ

೨ ಬೀದಿ ನಾಯಿಗಳನ್ನು ದತ್ತು ಪಡೆಯಲು ಶ್ವಾನಪ್ರಿಯರನ್ನು ಆಹ್ವಾನಿಸುವ ಬಗ್ಗೆ ಆಗಾಗ್ಗೆ ಪತ್ರಿಕಾ ಪ್ರಕಟಣೆಗಳನ್ನು ಹೊರಡಿಸಬಹುದು. ದತ್ತು ಪಡೆಯುವವರ ಆಧಾರ್ ಸಂಖ್ಯೆ ಇತ್ಯಾದಿಗಳನ್ನು ಪಡೆದು ನೋಂದಣಿ ಮಾಡಿಕೊಡಬಹುದು. ಆದರೆ, ನಾಯಿಯನ್ನು ಮತ್ತೆ ಬೀದಿಗಿಳಿಯಲು ಬಿಡುವುದಿಲ್ಲ ಮತ್ತು ಹಾಗೊಮ್ಮೆ ಬಿಟ್ಟು ಉಲ್ಲಂಘಿ ಸಿದರೆ ಅದಕ್ಕೆ ದತ್ತು ಪಡೆದವರೇ ಜವಾಬ್ದಾರರಾಗುತ್ತಾರೆ ಎಂದು ಮುಚ್ಚಳಿಕೆ ಬರೆಸಿಕೊಳ್ಳಬೇಕು

೩ ಶ್ವಾನಪ್ರಿಯರು ಉಳಿದ ಆರೋಗ್ಯವಂತ ನಾಯಿಗಳನ್ನು ಸೂಕ್ತ ಕಾಳಜಿ ಮತ್ತು ತಪಾಸಣೆಯೊಂದಿಗೆ ಆಶ್ರಯ ಕೇಂದ್ರಗಳಲ್ಲಿ ನೋಡಿಕೊಳ್ಳಬಹುದು

೪ ಆರೋಗ್ಯವಂತ ನಾಯಿಗಳ ಸಂಖ್ಯೆ ಹೆಚ್ಚಿದ್ದರೆ ಅಥವಾ ಅವು ನಿರ್ವಹಿಸಲು ಸಾಧ್ಯವಾಗದಷ್ಟು ಸಂಖ್ಯೆಯಲ್ಲಿದ್ದರೆ, ಅವುಗಳನ್ನು ದಟ್ಟವಾದ ಅರಣ್ಯ ಪ್ರದೇಶಗಳಿಗೆ ಕರೆದೊಯ್ದು ಬಿಡುವ ಮೂಲಕ ಹುಲಿ, ಚಿರತೆ ಮುಂತಾದ ಕಾಡು ಪ್ರಾಣಿಗಳಿಗೆ ಸುರಕ್ಷಿತ ಆಹಾರವಾಗುವಂತೆ ಮಾಡಬಹುದು. ನಾಯಿ ಮಾಂಸವನ್ನು ಕಾಡುಪ್ರಾಣಿಗಳು ಸೇವಿಸುವ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಬಹುದು. ಆದರೆ, ಆಹಾರಕ್ಕಾಗಿ ಹಳ್ಳಿಗಳ ಮೇಲೆ ದಾಳಿ ಮಾಡುವಾಗ ಕಾಡು ಪ್ರಾಣಿಗಳು ನಾಯಿಗಳನ್ನು ಕೂಡ ಹೊತ್ತೊಯ್ಯುವುದು ನಿಜವಷ್ಟೇ. ಕಾಡಿನ ಬಳಿ ಕುರಿ/ಹಸುಗಳನ್ನು ಮೇಯಿಸುವ ರೈತರ ಮೇಲೆ ಹಸಿವಿನಿಂದ ಕಂಗೆಟ್ಟ ಕಾಡು ಪ್ರಾಣಿಗಳು ದಾಳಿ ನಡೆಸುತ್ತಿವೆ; ಅವರನ್ನು ಕೊಲ್ಲುತ್ತಿವೆ, ತಿನ್ನುತ್ತಿವೆ. ಅವು ಎಷ್ಟಾದರೂ ಮಾಂಸಾಹಾರ ಪ್ರಾಣಿಗಳು, ಎಷ್ಟೇ ಹಸಿವಾದರೂ ಅವು ಹುಲ್ಲು ತಿನ್ನುವುದುಂಟೇ? ಪ್ರಾಣಿಗಳ ಜೀವಕ್ಕಿಂತ ಮನುಷ್ಯರ ಜೀವ ಹೆಚ್ಚು ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮೇಲಿನ ಸಲಹೆಗಳನ್ನು ನೀಡಲಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯವು ಒಳ್ಳೆಯದಲ್ಲ ಸರಿ. ಆದರೆ ಭಾರತ ಗೋಮಾಂಸದ ಅಗ್ರ ರಫ್ತುದಾರ ದೇಶ ಗಳಲ್ಲಿ ಒಂದೆಂಬ ಅಂಶವೂ ಇಲ್ಲಿ ಗಮನಾರ್ಹವಾಗಿದೆ.

Tags:
error: Content is protected !!