ಮೈಸೂರಿನಲ್ಲಿ ಪತಂಜಲಿ ಯೋಗ ಸಮಿತಿ, ಬಾಬಾ ರಾಮದೇವ್ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ), ಸಿದ್ಧ ಸಮಾಧಿ ಯೋಗ, ಆರ್ಟ್ ಆಫ್ ಲಿವಿಂಗ್, ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಜಿ.ಎಸ್.ಎಸ್ ಯೋಗ ಸಂಸ್ಥೆ, ಮೈಸೂರು ಯೋಗ ಒಕ್ಕೂಟ, ಯೋಗ ಭಾರತ್, ಉಪನಿಷತ್ ಯೋಗ, ಈಶಾ ಫೌಂಡೇಶನ್, ಮೈಸೂರು ಜಿಲ್ಲಾ ಯೋಗ ಸೋರ್ಟ್ಸ್ ಫೌಂಡೇಷನ್ ಸೇರಿದಂತೆ ನಾನಾ ಸಂಸ್ಥೆಗಳು ಯೋಗ -ಧ್ಯಾನ ಕಲಿಸುವ ಕಾಯಕ ಮಾಡುತ್ತಿವೆ. ಪ್ರತಿದಿನ ೧೫ರಿಂದ ೨೦ ಸಾವಿರ ಜನ ೋಂಗ ಕಲಿಯುತ್ತಿದ್ದಾರೆ.
ಕೆ.ಬಿ.ರಮೇಶನಾಯಕ
ಮೈಸೂರು: ಬಿಳಿ ಜುಬ್ಬಾ, ಪೈಜಾಮ ಧರಿಸಿ ಸೈಕಲ್‌ನಲ್ಲಿ ಹೊರಟವರನ್ನು ಗಮನಿಸಿದರೆ ಅವರು ಯೋಗಕ್ಕೆ ಹೋಗುತ್ತಿರಬಹುದು ಎಂದು ನಿಸ್ಸಂದೇಹವಾಗಿ ಹೇಳಬಹುದು. ಏಕೆಂದರೆ ಮೈಸೂರಿನ ಗೋಕುಲಂ ಸೇರಿ ಬಹಳಷ್ಟು ಬಡಾವಣೆಗಳು ಯೋಗ ಹಬ್‌ಗಳಾಗಿ ಮಾರ್ಪಟ್ಟಿವೆ.
ಯೋಗ ಭಾರತೀಯ ಜೀವನ ಪದ್ಧತಿ, ಆರೋಗ್ಯದ ಭಾಗ್ಯ ಎಂದೆಲ್ಲಾ ಹೇಳಿಕೊಳ್ಳುತ್ತಿರುವ ನಡುವೆಯೇ ಯೋಗ ಬ್ರ್ಯಾಂಡ್ ಮೂಲಕ ಆರ್ಥಿಕ ವಹಿವಾಟನ್ನು ವೃದ್ಧಿಸಿಕೊಳ್ಳುವ ಪ್ರಯತ್ನ ಸಣ್ಣ ಹಂತದಲ್ಲಿ ನಡೆದಿದೆ. ಇಂಥ ಪ್ರಯತ್ನಕ್ಕೆ ಕೊಡುಗೆ ನೀಡಿದ ನಗರಿ ಮೈಸೂರು. ಏಕೆಂದರೆ ಜಗತ್ತಿನ ಹತ್ತಾರು ದೇಶಗಳಿಗೆ ಯೋಗವನ್ನು ಪರಿಚಯಿಸಿದ್ದರ ಹಿಂದೆ ಮೈಸೂರಿನದ್ದೇ ದೊಡ್ಡ ಪಾಲು. ಯೋಗ ಕಲಿಕೆಗೆ ಮೈಸೂರು ಸೂಕ್ತ ನಗರಿ, ನೀವು ಭೇಟಿ ನೀಡಲೇ ಬೇಕಾದ ಜಗತ್ತಿನ ಅತ್ಯುತ್ತಮ ೩೧ ತಾಣಗಳ ಪೈಕಿ ಮೈಸೂರು ಕೂಡ ಒಂದು. ಶಾಸ್ತ್ರೀಯವಾಗಿ ಯೋಗ ಕಲಿಯಬೇಕೆಂದರೆ, ಮೈಸೂರಿಗೆ ಖಂಡಿತ ಭೇಟಿ ನೀಡಲೇ ಬೇಕು ಎಂದು ನ್ಯೂಯಾರ್ಕ್ ಟೈಮ್ಸ್ ಐದು ವರ್ಷದ ಹಿಂದೆೆುೀಂ ಸಮೀಕ್ಷೆೊಂಂದನ್ನು ಆಧರಿಸಿ ಹೇಳಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಈಗಲೂ ಯೋಗ ಕಲಿಯಲೆಂದು ಹೊರ ದೇಶಗಳಿಂದ ಬರುವ ವಿದೇಶಿಗರ ಪೈಕಿ ಬಹುತೇಕರಿಗೆ ಮೈಸೂರು ಪ್ರಥಮ ಆದ್ಯತೆ. ವಿದೇಶಿಯರಿಗೆ ಯೋಗ ಹೇಳಿಕೊಟ್ಟು ಲಕ್ಷ ಗಟ್ಟಲೇ ಹಣ ಗಳಿಸುವ ಕೆಲವು ಯೋಗ ಶಾಲೆಗಳ ಜತೆಯಲ್ಲೇ ಯಾವುದೇ ಫಲಾಪೇಕ್ಷೆಯಿಲ್ಲದೆ ಯೋಗವನ್ನು ಸರಳ ಶೈಲಿಯಲ್ಲಿ ಹೇಳಿಕೊಡುವ ಹತ್ತಾರು ಸಂಸ್ಥೆಗಳಿಗೂ ಮೈಸೂರು ಆಶ್ರಯ ನೀಡಿದೆ ಎಂಬುದು ಸಂತೋಷಕರ ವಿಷಯವಾಗಿದೆ.
ಮೈಸೂರು ಟ್ರೆಂಡ್: ಯೋಗ ಮೈಸೂರಿನಲ್ಲಿ ಟ್ರೆಂಡ್ ಆಗಿ ಬೆಳೆದುಬಂದಿದೆ. ಸಾಕಷ್ಟು ಯೋಗ ಗುರುಗಳು ತಯಾರಾಗಿದ್ದು, ಇದನ್ನೇ ವೃತ್ತಿಯಾಗಿ ಸ್ವೀಕರಿಸಿದ್ದಾರೆ. ವಿದೇಶದಲ್ಲಿಯೂ ಸಾಕಷ್ಟು ಮಂದಿ ಮೈಸೂರಿನವರು ಯೋಗ ಶಿಕ್ಷಕರಾಗಿ ಯೋಗವನ್ನು ವಿಶ್ವದಾದ್ಯಂತ ಪಸರಿಸುತ್ತಿದ್ದಾರೆ. ಮೈಸೂರಿನಲ್ಲಿ ಸಾಕಷ್ಟು ಯೋಗ ಕೇಂದ್ರಗಳು ಹಾಗೂ ಯೋಗ ಶಿಕ್ಷಣ ಸಂಸ್ಥೆಗಳಿವೆ. ಆದರೆ, ಅವು ಹೆಚ್ಚು ಪ್ರಚಾರವಿಲ್ಲದೆ ಸೀಮಿತ ಮಟ್ಟದಲ್ಲಿ ನಡೆಯುತ್ತಿವೆ. ಇದೀಗ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮೈಸೂರು ಯೋಗ ‘ಹಬ್’ ಆಗಿ ಪರಿವರ್ತನೆಯಾಗಲಿದೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಮೈಸೂರು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ. ಯೋಗ ಮಾತ್ರವಲ್ಲದೆ ಟೂರಿಸಂ ಕ್ಷೇತ್ರಕ್ಕೂ ಇದರಿಂದ ಪ್ರೋತ್ಸಾಹ ಸಿಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಯೋಗ ಟೌನ್‌ಶಿಪ್: ಯೋಗ ಚಟುವಟಿಕೆಯಿಂದ ಬಡಾವಣೆಗಳು ಫೇಮಸ್: ಮೈಸೂರಿನ ನಾಲ್ಕೆ ದು ಬಡಾವಣೆಗಳು ೋಂಗ ಟೌನ್‌ಶಿಪಗಳ ಸ್ವರೂಪ ಪಡೆದುಕೊಂಡಿವೆ. ಇದರಲ್ಲಿ ಮೊದಲ ಹೆಸರು ಗೋಕುಲಂ. ಒಂದು ಕಾಲಕ್ಕೆ ನಿವೃತ್ತರ ಸ್ವರ್ಗದಂತಿದ್ದ ಗೋಕುಲಂ ಬಡಾವಣೆ ಯೋಗದ ಚಟುವಟಿಕೆಗಳಿಂದಲೇ ಹೆಸರು ಮಾಡಿದೆ. ಇಲ್ಲಿ ಯೋಗ ಕಲಿಕೆಯ ವಿಭಿನ್ನ ಸ್ವರೂಪಗಳು ತಲೆ ಎತ್ತಿವೆ. ಹದಿನೈದಕ್ಕೂ ಹೆಚ್ಚು ಯೋಗ ಶಾಲೆಗಳು, ಅವುಗಳನ್ನು ಹುಡುಕಿಕೊಂಡು ಬರುವ ವಿದೇಶಿಗರು, ಇವರಿಗೆ ಸೇವೆ ನೀಡುವ ಗೃಹೋದ್ಯಮ, ಹೊಟೇಲ್, ರೆಸ್ಟೋರೆಂಟ್, ಬಟ್ಟೆ ಅಂಗಡಿಗಳು ರೂಪುಗೊಂಡಿವೆ. ಇದೇ ರೀತಿ ಲಕ್ಷ್ಮೀಪುರಂ ಬಡಾವಣೆ ಕೂಡ ಯೋಗದ ಮತ್ತೊಂದು ಪ್ರದೇಶವಾಗಿ ಮಾರ್ಪಟ್ಟಿದೆ. ವಿಜಯನಗರ, ಚಾಮರಾಜಪುರಂ, ಸರಸ್ವತಿಪುರಂ, ಬೋಗಾದಿ, ಕುವೆಂಪುನಗರದಲ್ಲೂ ಇದೇ ಮಾದರಿ ಜನಪ್ರಿಯವಾಗಿದ್ದು, ಆಯುರ್ವೇದ ಆರೋಗ್ಯಧಾಮಗಳೊಂದಿಗೆ ಯೋಗ ತರಗತಿ ನಡೆಸುವ ಟ್ರೆಂಡ್ ಕೂಡ ಇದರೊಂದಿಗೆ ಸೇರಿಕೊಂಡಿದೆ.
ನ್ಯೂಯಾರ್ಕ್ ಟೈಮ್ಸ್ ಗುರುತಿಸಿತ್ತು:
ಕಳೆದ ಐದು ವರ್ಷಗಳ ಹಿಂದೆಯೇ ಮೈಸೂರಿನ ಯೋಗ ಖ್ಯಾತಿಯನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಗುರುತಿಸಿ ವರದಿ ಪ್ರಕಟಿಸಿತ್ತು. ‘ಶಾಸ್ತ್ರೀಯವಾಗಿ ಯೋಗ ಕಲಿಯಬೇಕೆಂದರೆ ಮೈಸೂರಿಗೆ ಭೇಟಿ ನೀಡಿ’ ಎಂದು ಹೇಳಿತ್ತು.
ವಿದೇಶಿಯರ ಮೆಚ್ಚಿನ ತಾಣ:
ಸಾಕಷ್ಟು ವಿದೇಶಿಯರು ಮೈಸೂರಿಗೆ ಯೋಗ ಕಲಿಯಲು ಬರುತ್ತಿದ್ದಾರೆ. ಮೈಸೂರಿನಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ೋಂಗ ಕೇಂದ್ರಗಳಿವೆ. ನಗರದ ವಿವಿಧ ಪಾರ್ಕ್‌ಗಳಲ್ಲಿಯೂ ನಿತ್ಯ ಬೆಳಗ್ಗೆ ಹಾಗೂ ಸಂಜೆ ಯೋಗಾಭ್ಯಾಸ ನಡೆಯುತ್ತಿದೆ.
ಮೈಸೂರಿಗೆ ಕೇವಲ ಯೋಗ ಕಲಿಯಲು ಮಾತ್ರ ಜನರು ಬರುವುದಿಲ್ಲ. ಅಧ್ಯಯನಕ್ಕಾಗಿ ಬರುತ್ತಾರೆ. ಒಂದೂವರೆ- ಎರಡು ಗಂಟೆಗಳ ಅವಧಿಯ ತರಬೇತಿಯನ್ನು ಮುಗಿಸಿಕೊಂಡು ಬಳಿಕ ಅಧ್ಯಯನದಲ್ಲಿ ತೊಡಗುತ್ತಾರೆ. ಇದರಿಂದಾಗಿ ಯೋಗ ಕೇಂದ್ರಗಳು ದಿನಾಪೂರ್ತಾ ಚಟುವಟಿಕೆಯಿಂದ ಕೂಡಿರುತ್ತವೆ.
ಯೋಗ ಜೀವನದ ಪರಿಪೂರ್ಣ ಬದಲಾವಣೆಗೆ ಪೂರಕವಾಗಿದೆ. ಉನ್ನತ ಮಟ್ಟದಲ್ಲಿ ಆಲೋಚನಾ ಕ್ರಮವನ್ನು ಬೆಳಸುತ್ತದೆ. ಮಾನಸಿಕ-ದೈಹಿಕ ಸದೃಢತೆಯನ್ನು ನೀಡುತ್ತದೆ. ಮಾನಸಿಕ ಖಿನ್ನತೆಗೆ ಒಳಗಾಗಿ, ಜೀವನ ಮಾರ್ಗದಿಂದ ಹಿಮ್ಮುಖವಾಗಿ ಚಲನೆ ಮಾಡುವಂತಹ ಜನರಿಗೆ ಆತ್ಮವಿಶ್ವಾಸ ಬರುವಂತೆ ಮಾಡುವ ಶಕ್ತಿ ಯೋಗ ಶಿಕ್ಷಣಕ್ಕೆ ಇದೆ.
ದಿನಕ್ಕೊಂದು ಆಸನ
ಸರ್ವಾಂಗಾಸನ
ಇದನ್ನು ಆಸನಗಳ ತಾಯಿ ಎಂದು ಕರೆಯಲಾಗಿದೆ. ಆಸನಗಳ ರಾಣಿ ಎನ್ನುವ ಹೇಳಿಕೆಯೂ ರೂಢಿಯಲ್ಲಿದೆ.
ಅಭ್ಯಾಸ ಕ್ರಮ:
*ಸಮತಲ ಸ್ಥಿತಿಯಲ್ಲಿ ಮಲಗಿ, ಶ್ವಾಸವನ್ನು ತಗೆದುಕೊಳ್ಳುತ್ತಾ ಎರಡೂ ಕಾಲುಗಳನ್ನು ೩೦ ಡಿಗ್ರಿಯಷ್ಟು ಎತ್ತಿ ನಿಲ್ಲಿಸಿ, ಮುತ್ತೆ ಮುಂದುವರಿಸುತ್ತಾ ೬೦,೯೦,೧೨೦ ಕೋನದವರೆಗೆ ಹೋಗಿ.
* ಇಡೀ ಶರೀಕರ ಭಾಗವನ್ನು ಲಂಬದಂತೆ ಮೇಲೆತ್ತಿ ಸೊಂಟಕ್ಕೆ ಕೈಗಳನ್ನು ಆಧಾರವಾಗಿಟ್ಟು ಮೊಣಕೈಗಳ ಮೇಲೆ ಭಾರ ಬೀಳುವಂತೆ ನಿಲ್ಲಿ.
* ಗದ್ದವನ್ನು ಎದೆಯ ಮೇಲ್ಭಾಗದ ಕುಳಿಗೆ ತಾಗಿಸಿ,ಕೆಲ ಸಮಯ ಈ ಸ್ಥಿತಿಯಲ್ಲಿ ನಿಂತು ನಂತರ ಹೋದ ಕ್ರಮದಲ್ಲೇ ಶ್ವಾಸ ಬಿಡುತ್ತಾ ಹಿಂದೆ ಬನ್ನಿ.
ಲಾಭಗಳು:
*ದೇಹಕ್ಕೆ ಬರಬಹುದಾದ ಅನೇಕ ರೋಗಗಳ ನಿಯಂತ್ರಣಕ್ಕೆ ಸಿದ್ಧೌಷಧ.
*ನಿರ್ನಾಳ ಗ್ರಂಥಿಗಳ, ಕುತ್ತಿಗೆಯ ಬಳಿ ಇರುವ ಥೈರಾಯಿಡ್, ಪ್ಯಾರಾ ಥೈರಾಯಿಡ್ ಗ್ರಂಥಿಗಳು ವಿಶೇಷ ಪ್ರಚೋದನೆಗೆ ಒಳಗಾಗುವುದು.
*ಭೂಮಿಯ ಗುರುತ್ವಾಕರ್ಷಣ ಶಕ್ತಿಯ ವಿರುದ್ಧವಾಗಿ ಕಾಲುಗಳ ಭಾಗ ಮೇಲು ಮಾಡಿ ಕುತ್ತಿಗೆ ಸೋಂಟ ಕೈಗಳ ಮೇಲೆ ಭಾರ ಬಿಟ್ಟು ನಿಂತಿರುವುದರಿಂದ ಶುದ್ಧರಕ್ತ ಪ್ರಯತನವಿಲ್ಲದೆಯೇ ಶಿರೋಭಾಗದ ಕಡೆಗೆ ಹರಿಯುತ್ತದೆ.
* ಉಸಿರಾಟದ ತೊಂದರೆಗಳ ನಿವಾರಣೆ, ಉಬ್ಬಸ, ಗೊರಲು, ಬ್ರಾಂಕೈಟಿಸ್, ಮತ್ತೆ-ಮತ್ತೆ ಬರುವ ನೆಗಡಿ, ತಲೆನೋವುಗಳು ಶಮನಗೊಳ್ಳಲು ಸಹಾಯಕ.
* ನರಮಂಡಲ ದೌರ್ಬಲ್ಯಗಳ ನಿವಾರಣೆ, ಮುಟ್ಟಿನ ದೋಷಗಳ ನಿವಾರಣಗೆ ಸಹಾಯಕ.
* ಮೂಳೆ ರೋಗ ಹಾಗೂ ಆ್ಯಸಿಡಿಟಿಗಳ ನಿವಾರಣೆ, ಕೊಬ್ಬಿನ ಅಂಶ ಕರಗಿ ಅನಗತ್ಯ ತೂಕ ಕಡಿಮೆ ಮಾಡಲು ಪೂರಕ.
* ಸ್ಮರಣ-ಗ್ರಹಣ-ಏಕಾಗ್ರತೆಯ ವರ್ಧನಗೆ ಸಹಕಾರಿ, ಮೂಳೆ-ಮೇರು ದಂಡ ಸ್ಥಿತಿಸ್ಥಾಪಕತ್ವವನ್ನು ಹೊಂದುತ್ತದೆ.
* ಬೆನ್ನು ನೋವು ನಿವಾರಣೆಗೆ ಸರಳ ಆಸನ.
ಎಚ್ಚರಿಕೆ:
ರಕ್ತದೊತ್ತಡ ಇರುವವರು ನೇರವಾಗಿ ಇದರ ಅಭ್ಯಾಸಕ್ಕೆ ತೊಡಗಬಾರದು. ಬೆನ್ನುಮೂಳೆಯ ಸ್ಪಾಂಡುಲೈಟಿಸ್ ಇರುವವರಿಗೆ ಇದರ ಅಭ್ಯಾಸ ನಿಷಿದ್ಧ. ಕಿವಿ ಸೋರುವವರು, ಗ್ಲುಕೋಮಾ ಇರುವವರು ಕಡ್ಡಾಯವಾಗಿ ಮಾಡಬಾರದು.