– ಚೈತ್ರಾ ಎನ್ ಭವಾನಿ, ಲೈಫ್ ಸ್ಟೈಲ್ ಜರ್ನಲಿಸ್ಟ್
ಮಾನ್ಸೂನ್ ಬಂತಂದ್ರೆ ಎಲ್ಲೆಲ್ಲೂ ಹಸಿ ಹಸಿಯಾದ ವಾತಾವರಣ. ಮಳೆಯ ಈ ಸೌಂದರ್ಯದೊಂದಿಗೆ ನಾವು ಧರಿಸುವ ಉಡುಗೆಯೂ ಹೊಂದಿಕೊಂಡರೇ ನಮ್ಮ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರುಗು ಬರುವುದರಲ್ಲಿ ಅನುಮಾನವೇ ಇಲ್ಲ. ಹಾಗಾದ್ರೆ ಮಳೆಗಾಲದಲ್ಲಿ ಯಾವೆಲ್ಲಾ ಔಟ್ಫಿಟ್ಗಳು ಸೌಂದರ್ಯ ಇಮ್ಮಡಿಗೊಳಿಸುತ್ತವೆ? ಈ ಎಲ್ಲದರ ಬಗ್ಗೆಯೂ ಒಂದಷ್ಟು ಮಾಹಿತಿ ಇಲ್ಲಿದೆ.
ಶಾರ್ಟ್ ಟಾಪ್ಸ್ ಮತ್ತು ಆ್ಯಂಕಲ್ ಲೆಂತ್ ಲೆಗ್ಗಿನ್ಸ್: ನೀವು ಟ್ರೆಡಿಷನಲ್ ಉಡುಗೆ ಇಷ್ಟಪಡುವವರಾಗಿದ್ದರೆ ಶಾರ್ಟ್ ಟಾಪ್ ಅಥವಾ ಕುರ್ತಿ ಧರಿಸಬಹುದು. ಇದಕ್ಕೆ ಆ?ಯಂಕಲ್ ಲೆಂತ್ ಲೆಗ್ಗಿನ್ಸ್ ಹೊಂದುತ್ತದೆ. ಆ್ಯಂಕಲ್ ಲೆಂತ್ ಲೆಗ್ಗಿನ್ಸ್ ಮಳೆ ನೀರಿನಿಂದ ರಸ್ತೆಯ ಮೇಲೆ ಹರಿಯುವ ಧೂಳು ಮಿಶ್ರಿತ ನೀರಿನಿಂದ ಬಟ್ಟೆ ಹಾಳಾಗಂದಂತೆ ಕಾಪಾಡುತ್ತದೆ.
ನೀ ಲೆಂತ್ ಸ್ಕರ್ಟ್ : ಪೆನ್ಸಿಲ್ ಕಟ್ ಅಥವಾ ಎ ಕಟ್ ನಂತಹ ಸ್ಕರ್ಟ್ ಮಳೆಗಾಲಕ್ಕೆ ಹೊಂದುತ್ತದೆ. ಇದಕ್ಕೆ ದೊಡ್ಡ ಸಾಕ್ಸ್ ಮತ್ತು ವಾಟರ್ ಪ್ರೂಫ್ ಶೂ ಬಳಸುವುದು ಸೂಕ್ತ. ಇದರಿಂದ ಮಳೆಗಾಲದಲ್ಲಿ ಪಾದಗಳ ರಕ್ಷಣೆಯಾಗುತ್ತದೆ.
ಬೇಸಿಕ್ ಜಂಪ್ ಸೂಟ್ : ಮಳೆಗಾಲದಲ್ಲಿ ಬೇಸಿಕ್ ಶಾರ್ಟ್ ಜಂಪ್ ಸೂಟ್ಗಳು ನಿಮ್ಮ ಅಂದವನ್ನು ಹೆಚ್ಚಿಸುತ್ತವೆ. ಮಳೆಗಾಲದ ಬಣ್ಣಗಳಾದ ನೀಲಿ, ಕೆಂಪು, ಹಳದಿ, ಬಿಳಿ ಬಣ್ಣದ ವಸ್ತ್ರಗಳು ಹೆಚ್ಚು ಆಕರ್ಷಕವಾಗಿ ಕಾಣುವುದಲ್ಲದೇ ನಿಮ್ಮ ಸೌಂದರ್ಯವನ್ನು ಇಮ್ಮಡಿ ಗೊಳಿಸುತ್ತದೆ.
ಪೋಲ್ಕಿ ಡಾಟ್ ಟಾಪ್ಸ್ ಅಥವಾ ಸ್ಯಾರಿ : ಪೋಲ್ಕಿ ಡಾಟ್ ಸೀರೆ, ಟಾಪ್ಸ್ ಮೋಡ ಮುಚ್ಚಿದ ವಾತಾವರಣಕ್ಕೆ ವಿಶೇಷ ಮೆರುಗು ನೀಡುತ್ತದೆ, ಅಲ್ಲದೇ ನಿಮ್ಮನ್ನು ಹೈಲೈಟ್ ಮಾಡುತ್ತದೆ.
ವಾಟರ್ ಪ್ರೂಫ್ ಶೂ ಮತ್ತು ಲಾಂಗ್ ಸಾಕ್ಸ್ : ಮಳೆಗಾಲದಲ್ಲಿ ವಾಟರ್ ಪ್ರೂಫ್ ಶೂ ಇರಲೇಬೇಕು. ಅಲ್ಲದೇ ಮಂಡಿಯವರೆಗೂ ಬರುವಂತಹ ಸಾಕ್ಸ್ಗಳನ್ನು ಧರಿಸಿದ್ರೆ ಕಾಲುಗಳ ರಕ್ಷಣೆಯಾಗುತ್ತದೆ. ಜೊತೆಗೆ ಹ್ಯಾಂಡ್ ಗ್ಲೌಸ್ ಮರೆಯಬೇಡಿ. ಜಾಕೆಟ್ಸ್ : ಟೀ ಶರ್ಟ್, ಜೀನ್ಸ್ ಏನೇ ಧರಿಸಿದ್ರೂ ವಾಟರ್ ಪ್ರೂಫ್ ಜಾಕೆಟ್ ಧರಿಸುವುದನ್ನು ಮರೆಯಬೇಡಿ. ಇದು ನಿಮ್ಮ ಲುಕ್ ಅನ್ನು ಬದಲಿಸುವುದರ ಜೊತೆಗೆ ಮಳೆಯಿಂದ ರಕ್ಷಣೆ ನೀಡುತ್ತದೆ.