ಇವರು ಮೈಸೂರಿನ ಕಾಷ್ಠಶಿಲ್ಪಿ ಕುವಾರ್ ಚಂದ್ರನ್. ಐದು ವರ್ಷದ ಬಾಲಕನಿರುವಾಗ ಕೇರಳದ ತಿರುವನಂತಪುರದಿಂದ ತಂದೆ ನಾಗಪ್ಪ ಆಚಾರಿಯವರೊಂದಿಗೆ ಮೈಸೂರಿಗೆ ಬಂದು ಮರಕ್ಕೆ ಉಳಿ ಹಿಡಿಯಲು ತೊಡಗಿದ ಇವರಿಗೆ ಈಗ ಐವತ್ತಾರು ವರ್ಷ. ದೇವಾನುದೇವತೆಗಳನ್ನೂ, ಶಿಲಾಬಾಲಿಕೆಯರನ್ನೂ ಕಣ್ಣಿಗೆ ಕಟ್ಟುವ ಹಾಗೆ ಒಣಮರದಲ್ಲಿ ಜೀವ …
ಇವರು ಮೈಸೂರಿನ ಕಾಷ್ಠಶಿಲ್ಪಿ ಕುವಾರ್ ಚಂದ್ರನ್. ಐದು ವರ್ಷದ ಬಾಲಕನಿರುವಾಗ ಕೇರಳದ ತಿರುವನಂತಪುರದಿಂದ ತಂದೆ ನಾಗಪ್ಪ ಆಚಾರಿಯವರೊಂದಿಗೆ ಮೈಸೂರಿಗೆ ಬಂದು ಮರಕ್ಕೆ ಉಳಿ ಹಿಡಿಯಲು ತೊಡಗಿದ ಇವರಿಗೆ ಈಗ ಐವತ್ತಾರು ವರ್ಷ. ದೇವಾನುದೇವತೆಗಳನ್ನೂ, ಶಿಲಾಬಾಲಿಕೆಯರನ್ನೂ ಕಣ್ಣಿಗೆ ಕಟ್ಟುವ ಹಾಗೆ ಒಣಮರದಲ್ಲಿ ಜೀವ …
ಬೆಳಗಿನ ಖಾಲಿತನ ಸರಿಸಿಟ್ಟ ಮನೆಯಂಗಳ ಬೈಗಿನಲ್ಲಿ ಗಾಳಿಪಟ ತಾಂರಿಗಾಗಿ ಮಕ್ಕಳ ದಂಡಿನ ಗೌಜಿನಲ್ಲಿರುತ್ತಿತ್ತು. ಪತ್ರಿಕೆ ಹರಿದು, ಅನ್ನ ನುರಿದು ಅಂಟಾಗಿಸಿ, ಹಿಡಿಕಡ್ಡಿಗಳನ್ನು ಅಲ್ಲಲ್ಲಿ ಒತ್ತಿಟ್ಟು, ಸ್ಕೆಚ್ ಪೆನ್‌ನಲ್ಲಿ ಎರಡು ಕಣ್ಣರಳಿಸಿ, ಉದ್ದಕ್ಕೆ ಬಾಲ ಜೋತು ಬಿಟ್ಟ ಗಾಳಿಪಟ ಹಕ್ಕಿಗಳಲ್ಲೇ ವಿಶೇಷ ಅಂತೆನಿಸುತ್ತಿತ್ತು. …
ಕೆನಡಾದ ಟೊರಾಂಟೊದಲ್ಲಿ, ಸೆಂಟರ್ ಆಫ್ ಕಾಗ್ನಿಟೀವ್ ಕಾಂಪ್ಯೂಟಿಂಗ್ ಎಂಬ ಕೃತಕ ಬುದ್ಧಿಮತ್ತೆಯ ಪ್ರಯೋಗಶಾಲೆಯಲ್ಲಿ ರೀಸರ್ಚ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಕನ್ನಡದ ಲೇಖಕ ಶೇಷಾದ್ರಿ ಗಂಜೂರ್ ರಿಗೆಇತ್ತೀಚೆಗೆ ಇನ್ನೊಂದು ಹೊಸ ಯೋಚನೆ ಬಂತು. ನಮ್ಮ ಭಾವ ಪ್ರಪಂಚವನ್ನು ಮುಟ್ಟುವಂತಹ ಕವನಗಳ ಸಾಲುಗಳನ್ನು …
-ಅನುಷ್ ಶೆಟ್ಟಿ anushshetty31@gmail.com ಹೀಗೆ ಏನಾದರೊಂದನ್ನು ಬರೆಯುವುದು ಸುಲಭ. ಅಂತೆಯೇ ಹೀಗೆ ಏನಾದರೊಂದನ್ನು ಬರೆಯುವುದು ಕಷ್ಟ. ತಟ್ಟೆಯಲ್ಲಿರುವ ತಿನಿಸುಗಳಲ್ಲಿ ಬಹಳ ಇಷ್ಟವಾದ ಆ ಒಂದು ತಿನಿಸನ್ನು ಕಡೆಯಲ್ಲಿ ತಿನ್ನಲು ಉಳಿಸುವಂತೆ ಕೆಲವೊಮ್ಮೆ ಬರಹಕ್ಕೆ ಕೈಹಾಕುವ ಮುನ್ನ ಇತರೆ ಕೆಲಸಗಳನ್ನು …
ಅವಳ ಕೋಪದ ಕಟ್ಟೆಯೊಡೆದು, ‘ಕತ್ತೆ, ಇಲ್ಲಿ ಕಾದಂಬರಿಯ ಪಾತ್ರಗಳನ್ನು ಕಟ್ಟಿಹಾಕಲಾರದೇ ನಾನು ಪಡಿಪಾಟಲು ಪಡುತ್ತಿದ್ದರೆ ಇವನದು ಕಂಗ್ರಾಟ್ಸ್ ಅಂತೆ. ಮೊದಲು ಕಥೆ ಮುಗಿಸೋದು ಹೇಗೆ ಹೇಳು? ಮತ್ತೆ ಉಳಿದೆಲ್ಲ ಮಾತು’ ಎಂದು ಅಬ್ಬರಿಸಿದಳು. ಗೌರವ ತಣ್ಣಗೆ ನುಡಿದ, ‘ಲೋಕ ಹೇಳಿದಂತೆಲ್ಲ ಕೇಳಲು …
ಇವರು ಮಂಡ್ಯ ಜಿಲ್ಲೆ ದುದ್ದ ಹೋಬಳಿ ಮಲ್ಲಾಯನಕಟ್ಟೆಯ ಹಾಡುಗಾರ್ತಿ ನಾಟಿ ಸಾಕಮ್ಮ. ನಾಟಿ ಸಾಕಮ್ಮ ಅಂತ ಇವರ ಹೆಸರು ಯಾಕೆ ಅಂದರೆ ಇವರ ಊರಿನಲ್ಲಿ ಬಹಳ ಮಂದಿ ಸಾಕಮ್ಮಂದಿರು ಇದ್ದಾರೆ. ಆದರೆ ನಾಟಿ ಹಾಕುವಾಗ ಹಾಡು ಹೇಳುವ ಸಾಕಮ್ಮ ಇವರೊಬ್ಬರೇ. ಹಾಗಾಗಿ. …
ತುಳುನಾಡಿನ ‘ಪಂಜುರ್ಲಿ’ ಬೂತ ‘ಕಾಂತಾರ’ ಸಿನೆನಮಾದಲ್ಲಿ ಮಿಂಚುತ್ತಿರುವ ಹೊತ್ತಲ್ಲಿ ಲೇಖಕರು ತಮ್ಮ ತಾಯಿಯ ಮೈಮೇಲೆ ಬರುತ್ತಿದ್ದ ‘ಸಿರಿ’ ದೈವದ ಕುರಿತು ಬರೆದಿದ್ದಾರೆ ನಾವು ನಮ್ಮ ತಾಯಿಯನ್ನು ಅಬ್ಬಿ ಎಂದು ಕರೆಯುವುದು. ನನ್ನ ಅಬ್ಬಿ ದೈವದ ಪಾತ್ರಿ. ಮಾತಿಗೊಂದು ಆದ್ಗೇತಿ (ಗಾದೆ) ಹೇಳುವ …
ಲುಂಬಿನಿಯಲ್ಲಿ ಎತ್ತ ಕಣ್ಣು ಹಾಯಿಸಿದರೂ ಭೂಮಿಯಿಂದ ಆಕಾಶದಗಲಕ್ಕೂ ಆತನೇ ವ್ಯಾಪಿಸಿರುವಂತೆ ಭಾಸವಾಗುತ್ತಿತ್ತು. ಬೃಹದಾಕಾರದ ಈ ದೇವಾಲಯಗಳು, ಅವುಗಳ ಒಳಗೆ ಗೌತಮ ಬುದ್ಧನ ವಿಗ್ರಹಗಳು ಆಯಾ ದೇಶಗಳಲ್ಲಿ ಅನುಸರಿಸುವ ಬೌದ್ಧ ಧರ್ಮದ ರೀತಿಯನ್ನು ಪ್ರತಿನಿಧಿಸುತ್ತಿದ್ದವು. ಎಲ್ಲ ಬೌದ್ಧ ದೇವಾಲಯಗಳ ವಾಸ್ತುಶಿಲ್ಪ, ಒಳಗಿರುವ ಮೂರ್ತಿ, …
ಕರೋನಾ ಕಾಲದ ತಲ್ಲಣಗಳು, ಮರಳಿ ಹಳ್ಳಿ ಬದುಕಿನತ್ತ ಮತ್ತೆ ನಮ್ಮ ಕೈಬೀಸಿವೆ. ನಗರ ಬದುಕಿನ ಅನಾರೋಗ್ಯ, ಅಶಾಂತಿ, ಏಕಾಂಗಿತನ, ಆಹಾರ ಕಲಬೆರಕೆ, ಹವಾಮಾನ ವೈಪರೀತ್ಯ ಮತ್ತೆ ಹಳ್ಳಿ ಬದುಕಿನ ಆಸೆ ಚಿಗುರೊಡೆಸಿವೆ. ಬೆಳಕಿನ ಅಬ್ಬರದಲಿ ಕತ್ತಲ ತೆಗಳುತ್ತ ನಡೆದದ್ದು ಅಂಧಕಾರಕ್ಕೆ ಎಂದು …
ಹಬ್ಬ ಬಂದಾಗಲೆಲ್ಲ ಫೋನಾಯಿಸಿ, ‘ಹಬ್ಬಕ್ಕೆ ಊರಿಗೆ ಬಾ ಮಗನೆ’ ಎನ್ನುವ ಅವ್ವನ ಮಾತು ನೆನಪಿಗೆ ಬರುತ್ತದೆ. ಮಗಳು, ‘ಅಪ್ಪಾ ಈ ದೀಪಾವಳಿಗೆ ಪೊನ್ನಾಚಿಗೆ ಹೋಗೋಣವೇ? ಗೌರಿಕಡ್ಡಿ ಬೆಳಗೋಣವೇ’ ಎನ್ನುತ್ತಾಳೆ. ಹೌದು ಈ ಎಲ್ಲ ಸಂಭ್ರಮದಿಂದ ಇಷ್ಟು ವರುಷ ದೂರ ಇದ್ದೆ. ಈಗ …