ಎಪ್ಪತ್ತೆಂಟರ ಪುಟ್ಟಣ್ಣಯ್ಯ ಅವರು ಹಾಡುಗಳನ್ನು ಬರೆದಿಟ್ಟುಕೊಳ್ಳದೆ, ಅವುಗಳನ್ನೆಲ್ಲ ಹೃದಯಗತ, ಕಂಠಸ್ಥವಾಗಿಸಿಕೊಂಡಿದ್ದಾರೆ. ಒಂದೊಂದು ಹಾಡನ್ನು ಶಿಷ್ಯರ ಬಳಿ ಹೇಳುವಾಗ, ಅಷ್ಟೇ ನಿಷ್ಠೆಯನ್ನು ಅಪೇಕ್ಷಿಸುತ್ತಾರೆ ಪುಟ್ಟರಾಜು ಯಡಹಳ್ಳಿ ಮೈಸೂರು ಕುವೆಂಪುನಗರದ ಸುರುಚಿ ರಂಗಮನೆಯಲ್ಲಿ ಅಂದು ಸಂಗೀತದ ನಾದ ಬಿಡದೇ ಕೇಳುತ್ತಿತ್ತು. ಹೊಸ ನಾಟಕದ ತಯಾರಿಯಿರಬಹುದಾ? …