ಪ್ರೊ.ಎಸ್.ಚಂದ್ರಶೇಖರ್ ನಾಲ್ವಡಿಯವರ ಆಡಳಿತದಲ್ಲಿ ನೇಮಕವಾದ ಕೊನೆಯ ದಿವಾನರು ಮಿರ್ಜಾ ಮೊಹಮ್ಮದ್ ಇಸ್ಮಾಯಿಲ್. ಈಗಾಗಲೇ ಪ್ರಸ್ತಾಪಿಸಿದಂತೆ ಮಿರ್ಜಾ ಮತ್ತು ಒಡೆಯರ್ ಮನೆತನಗಳುಮೂರು ತಲೆಮಾರಿನಿಂದಲೂ ಸ್ನೇಹದಿಂದಿದ್ದವು. ಮಿಗಿಲಾಗಿ ಮಿರ್ಜಾ ಮತ್ತು ನಾಲ್ವಡಿಯವರು ಸುಮಾರು ಆರು ವರ್ಷಗಳ ಕಾಲ ಒಂದೇ ಶಾಲೆಯಲ್ಲಿ-ರಾಯಲ್ ಸ್ಕೂಲ್-ಕಲಿತವರು ಮತ್ತು ಸಹಪಾಠಿಗಳು. …










