ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸನಿಹದಲ್ಲಿ ಹರಿಯುವ ಕಪಿಲಾ ನದಿ ತೀರದಲ್ಲಿ ಪುಣ್ಯ ಸ್ನಾನ ಮಾಡುವವರು ಬಟ್ಟೆಗಳನ್ನು ಅಲ್ಲಿಯೇ ಬಿಟ್ಟು ಹೋಗುವುದರಿಂದ ನದಿ ಮಲಿನವಾಗುತ್ತಿದೆ. ಈ ನೀರನ್ನು ಬಳಸುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಜಲಚರಗಳಿಗೂ ಮಾರಕವಾಗಿದೆ. ನದಿಗಳನ್ನು ಮನುಕುಲದ ಜೀವನಾಡಿ ಎಂದು …






