ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಒಂದು ಗಂಟೆ ಕಾಲ ಬಜೆಟ್ ಮಂಡಿಸಿದ ವಿತ್ತ ಸಚಿವೆ 40000 ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಾಗಿ ಬದಲಾಯಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಮೆಟ್ರೊ ಮತ್ತು ನಮೋ ಭಾರತ್ ಯೋಜನೆಗಳಿಗೆ ಹೊಸ ಶಕ್ತಿ ತುಂಬುವ ಮೂಲಕ ದೇಶದ ಆಶೋತ್ತರಗಳಿಗೆ ರೈಲ್ವೆಯ ಒತ್ತಾಸೆ ದೊರಕಿಸಿಕೊಡಲಾಗುವುದು ಎಂದೂ ಸಹ ತಿಳಿಸಿದರು. ಭಾರತದಲ್ಲಿರುವ ಪ್ರಮುಖ ರೈಲ್ವೆ ಮಾರ್ಗಗಳ ಪೈಕಿ ಇಂಧನ, ಸಿಮೆಂಟ್, ಬಂದರು ಸಂಪರ್ಕ, ಹೆಚ್ಚಿನ ಜನಸಂಚಾರ ದಟ್ಟಣೆ ಇರುವ ಮಾರ್ಗಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುತ್ತೇವೆ, ಸಣ್ಣಪುಟ್ಟ ನಗರಗಳಿಗೂ ಮೆಟ್ರೊ ರೈಲು ವಿಸ್ತರಣೆ ಮಾಡಲಿದ್ದೇವೆ ಎಂದು ಹೇಳಿದರು.