ದಕ್ಷಿಣ ಆಫ್ರಿಕಾದ ಬೆನೊನಿಯ ವಿಲ್ಲೋಮೋರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿವೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿ ಭಾರತಕ್ಕೆ ಗೆಲ್ಲಲು 254 ರನ್‌ಗಳ ಸವಾಲಿನ ಗುರಿ ನೀಡಿದೆ.
16 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ ಆಸ್ಟ್ರೇಲಿಯಾ ತಂಡ ನಂತರ ಕಣಕ್ಕಿಳಿದ ಆಟಗಾರರ ಜವಾಬ್ದಾರಿಯುತ ಆಟದ ನೆರವಿನಿಂದ ಪೈಪೋಟಿಯುತ ರನ್ ಕಲೆಹಾಕಿತು. ತಂಡದ ಪರ ಹ್ಯಾರಿ ಡಿಕ್ಸನ್ 42, ಸ್ಯಾಮನ್ ಕೊನ್‌ಸ್ಟಾಸ್ ಡಕ್‌ಔಟ್, ನಾಯಕ ಹ್ಯೂ ವಿಬ್‌ಜೆನ್ 48, ಹರ್ಜಸ್ ಸಿಂಗ್ 55, ರ್ಯಾನ್ ಹಿಕ್ಸ್ 20, ರಾಫ್ ಮೆಕ್‌ಮಿಲನ್ 2, ಚಾರ್ಲಿ ಆಂಡರ್‌ಸನ್ 13, ಟಾಮ್ ಸ್ಟಾರ್ಕರ್ ಅಜೇಯ 8 ಹಾಗೂ ಓಲಿವರ್ ಪೀಕ್ ಅಜೇಯ 46 ರನ್ ಗಳಿಸಿದರು.
ಭಾರತದ ಪರ ರಾಜ್ ಲಿಂಬಾನಿ 3 ವಿಕೆಟ್, ನಮನ್ ತಿವಾರಿ 2, ಸೌಮಿ ಪಾಂಡೆ ಹಾಗೂ ಮುಶೀರ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.





